Ola, Uber ಮತ್ತು Rapido ಗೆ ಬಿಗ್ ಶಾಕ್! ರೈಡ್‌ಗೂ ಮುನ್ನ ‘ಟಿಪ್’ ಕೇಳಿದ್ರೆ ಕಠಿಣ ಕ್ರಮ; ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ! Cab Tips
ಒಲಾ, ಉಬರ್, ರ್ಯಾಪಿಡೋ ರೈಡ್ ಬುಕಿಂಗ್ ವೇಳೆ ಮುಂಗಡ ಟಿಪ್ಸ್ ಕೇಳುವುದಕ್ಕೆ ಕೇಂದ್ರ ಸರ್ಕಾರದಿಂದ ಬ್ರೇಕ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಒಲಾ, ಉಬರ್, ರ್ಯಾಪಿಡೋ ರೈಡ್ ಬುಕಿಂಗ್ ವೇಳೆ ಮುಂಗಡ ಟಿಪ್ಸ್ ಕೇಳುವುದಕ್ಕೆ ಕೇಂದ್ರ ಸರ್ಕಾರದಿಂದ ಬ್ರೇಕ್
ರೈಡ್ ಪೂರ್ಣಗೊಂಡ ಬಳಿಕ ಟಿಪ್ ಪಡೆಯಿರಿ
ಟಿಪ್ ಪಡೆದ ಸಂಪೂರ್ಣ ಮೊತ್ತ ಕ್ಯಾಪ್ಟನ್ ಖಾತೆಗೆ ಜಮವಾಗಬೇಕು
ನವದೆಹಲಿ: ಓಲಾ, ಉಬರ್ , ರ‍್ಯಾಪಿಡೋ ಸೇರಿದಂತೆ ಮೊದಲಾದ ಆನ್ಲೈನ್ ಸಾರಿಗೆ ವೇದಿಕೆಗಳಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮುಗೂದಾರ ಹಾಕಲು ಮುಂದಾಗಿದ್ದು, ಈ ಬಾರಿ ಟಿಪ್ (Cab Tips) ದಂದೆಗೆ ಬ್ರೇಕ್ ಹಾಕಲಿದೆ.
ಯಾವುದೇ ಒಂದು ರೈಡ್ ಪೂರ್ಣಗೊಳ್ಳುವ ಮೊದಲು ಪ್ರಯಾಣಿಕರಿಗೆ, ಪ್ರೀ ಬುಕ್ಕಿಂಗ್ ಟಿಪ್ ನೀಡಲು ಅವಕಾಶ ಕೊಡಬಾರದು, ಹಾಗೂ ಅಗ್ರಿಗೇಟರ್ಸ್ ಕಂಪನಿಗಳು ಪ್ರಯಾಣಿಕರಿಂದ ರೈಡ್‌ಗೂ ಮುನ್ನವೆ ಟಿಪ್ ಪಡೆಯುವು ಆಯ್ಕೆಯನ್ನು ನಿರ್ಭಂಧಿಸಬೇಕೆಂದು ಹೇಳಲಾಗಿದೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚಿಸಿದೆ.
ಈ ನೂತನ ನಿಯಮದ ಪ್ರಕಾರ, ರೈಡ್ ಬುಕ್ ಮಾಡುವ ಮೊದಲು, ಇನ್ನಷ್ಟು ಹಣವನ್ನು ಕೊಟ್ಟರೆ ಬೇಗ ಬುಕ್ಕಿಂಗ್ ಆಗುತ್ತದೆ, ಟಿಪ್ ನೀಡಲು ಇಲ್ಲಿ ಕ್ಲಿಕ್ ಮಾಡಿ, ಟಿಪ್ ನೀಡಿದರೆ ಡ್ರೈವರ್ ನಿಮ್ಮನ್ನು ಬೇಗ ತಲುಪಿಸುತ್ತಾನೆ, ನಿಮ್ಮ ರೈಡ್ ಸುಗಮವಾಗಿರಲಿದೆ. ಎಂಬೆಲ್ಲಾ ಸೂಚನೆಗಳನ್ನು ಈ ಕೂಡಲೇ ತೆರವುಗೊಳಿಸಬೇಕೆಂದು ಕೇಂದ್ರ ಖಡಕ್ ಎಚ್ಚರಿಕೆ ನೀಡಿದೆ.
ಬೇಕಾದರೆ ರೈಡ್ ಪೂರ್ಣಗೊಂಡ ನಂತರ, ಪ್ರಯಾಣಿಕ ಟಿಪ್ ನೀಡಲು ಅವಕಾಶ ಕೊಡಿ, ಆದರೆ ರೈಡ್ ಆರಂಭಿಸಲು ಹೆಚ್ಚುವರಿ ಹಣ ಕೇಳುವಂತಿಲ್ಲ ಎಂದು ಕೇಂದ್ರ ಸರ್ಕಾರದ ಆದೇಶ ತಿಳಿಸಿದೆ.
ಟಿಪ್ ಹಣ ಕ್ಯಾಪ್ಟನ್ಗೆ ಸೇರಬೇಕು!
ಹಾಗೆಯೇ ಟಿಪ್ ಮೂಲಕ ಬಂದಿರುವ ಹಣವನ್ನು ಸಂಪೂರ್ಣವಾಗಿ ಆ ವಾಹನ ಚಾಲಕನಿಗೆ ಸಲ್ಲಬೇಕು. ಟಿಪ್ ಹಣದಲ್ಲಿ ಸ್ವಲ್ಪ ಮೊತ್ತವನ್ನು ಅಗ್ರಿಗೇಟರ್ಸ್ ಕಂಪನಿಗಳು ಪಡೆಯುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗೆಯೇ ಪ್ರಯಾಣಿಕರಿಂದ ಹಣವನ್ನು ಪೀಕುವ ಸಲುವಾಗಿ ಟಿಪ್ ಆಯ್ಕೆಯನ್ನು ನೀಡಬಾರದು, ಜನರ ದಾರಿ ತಪ್ಪಿಸುವ ಪ್ರಕಟನೆ ಮಾಡಬಾರದೆಂದು ಅದೇಶದಲ್ಲಿ ತಿಳಿಸಲಾಗಿದೆ, (ಏಜನ್ಸೀಸ್).