ಇನ್ನೂ ಪರ್ವತಗಳಲ್ಲಿನ ಕಿರಿದಾದ ರಸ್ತೆಗಳಲ್ಲಿ ಪರಿಸ್ಥಿತಿ ಹೆಚ್ಚು ಜಟಿಲವಾಗಿದೆ ಎನ್ನಲಾಗಿದೆ. ಸಂಚಾರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದು, ಜೋಶಿಮಠ ಪ್ರದೇಶದಲ್ಲಿ ಗೇಟ್ ವ್ಯವಸ್ಥೆ-ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದಾರೆ. ಇದರ ಪ್ರಕಾರ, ಒಂದು ಕಡೆಯಿಂದ ಒಂದು ದಿಕ್ಕಿನಲ್ಲಿ ಸ್ವಲ್ಪ ಸಮಯದವರೆಗೆ ವಾಹನಗಳನ್ನು ಅನುಮತಿಸಲಾಗುತ್ತದೆ ಮತ್ತು ನಂತರ ಇನ್ನೊಂದು ದಿಕ್ಕಿನಲ್ಲಿ ವಾಹನಗಳನ್ನು ಅನುಮತಿಸಲಾಗುತ್ತದೆ.