ನವದೆಹಲಿ: ಶಬರಿ ಮಲೆ ದೇಗುಲಕ್ಕೆ 10 ರಿಂದ 50 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಪ್ರವೇಶವಿಲ್ಲ ಎಂಬುದಕ್ಕೆ ಸಂಬಂಧಿಸಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರವು ಒಂದು ಮಹತ್ವದ ವಾದವನ್ನು ಮಂಡಿಸಿದೆ. ಮಹಿಳೆಯರ ಪ್ರವೇಶ ನಿರ್ಬಂಧ ಕೇವಲ ತಾರತಮ್ಯವಲ್ಲ ಇದು ಆಯಾ ಕ್ಷೇತ್ರದ ಜನರ ನಂಬಿಕೆ. ಮಹಿಳೆಯರಿಗಷ್ಟೇ ಅಲ್ಲ ದೇಶದ ಎಷ್ಟೋ ದೇಗುಲಗಲ್ಲಿ ಪುರಷರಿಗೂ ಪ್ರವೇಶವೇ ಇಲ್ಲ(Temples Restrict Entry Of Men) ಎಂದು ಸಣ್ಣ ಪಟ್ಟಿಯನ್ನು ಸರ್ಕಾರ ಮುಂದಿಟ್ಟಿದೆ.