ಪವನ್ ಖೇರಾ ಮಾಡಿದ್ದ ಆರೋಪವನ್ನು ಅಲ್ಲಗೆಳೆದಿರುವ ಸಿಎಂ ಶರ್ಮಾ ಅವರ ಪತ್ನಿ ರಿನಿಕಿ ಭೂಯಾನ್ ಶರ್ಮಾ ಅವರು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆ ನಾಲ್ವರು ಸದಸ್ಯರ ಅಸ್ಸಾಂ ಪೊಲೀಸ್ ತಂಡವು ಸ್ಥಳೀಯ ಪೊಲೀಸರಿಗೆ ಮಾಹಿತಿ ವಿಚಾರಣೆ ನಡೆಸಲು ಖೇರಾ ನಿವಾಸಕ್ಕೆ ತೆರಳಿದೆ ಎನ್ನಲಾಗಿದೆ. ಇನ್ನೂ ಚುನಾವಣೆಗೂ ಮುನ್ನ ಖೇರಾ ಮಾಡಿರುವ ಆರೋಪಗಳು ಅಸ್ಸಾಂನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿವೆ.