ನವದೆಹಲಿಯಲ್ಲಿ ಶನಿವಾರ (ಏ.18) ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಮಸೂದೆಯನ್ನು ಸೋಲಿಸಿದ ವಿರೋಧ ಪಕ್ಷಕ್ಕೆ ದೇಶದ ಜನತೆ ಪ್ರಜಾಸತ್ತಾತ್ಮಕವಾಗಿ ಶಿಕ್ಷೆ ನೀಡಲಿದ್ದಾರೆ ಎಂದರು. ಇದನ್ನು ಪ್ರಜಾಪ್ರಭುತ್ವದ ಕರಾಳ ದಿನ ಎಂದು ಕರೆದ ರಿಜಿಜು, ಇದು ಸರ್ಕಾರದ ವೈಫಲ್ಯವಲ್ಲ ಬದಲಿಗೆ ದೇಶದ ಮಹಿಳೆಯರಿಗೆ ಹಕ್ಕು ಸಿಗದಂತೆ ತಡೆದ ಕಾಂಗ್ರೆಸ್ನ ವೈಫಲ್ಯ ಎಂದರು.