ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಆರೋಪ; ಏಕಕಾಲಕ್ಕೆ 23 ಹಣ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ರಾಜೀನಾಮೆ | Ayodhya Ram Mandir

ಅಯೋಧ್ಯೆ ಶ್ರೀರಾಮ ಮಂದಿರ
ಅಯೋಧ್ಯೆ ಶ್ರೀರಾಮ ಮಂದಿರ
Published on
ಲಖನೌ: ಅಯೋಧ್ಯೆ ಶ್ರೀರಾಮ ಮಂದಿರ(Ayodhya Ram Mandir) ದೇಣಿಗೆ ಕಳ್ಳತನ ಆರೋಪದ ಬಗ್ಗೆ ಎಸ್​ಐಟಿ ವಿಚಾರಣೆ ನಡೆಸುತ್ತಿರುವ ನಡುವೆಯೂ ಇಂದು(ಜು. 10) ದೇವಸ್ಥಾನದಲ್ಲಿ ದೇಣಿಗೆ ಹಣವನ್ನು ಎಣಿಸುತ್ತಿದ್ದ 23 ಉದ್ಯೋಗಿಗಳು ಏಕಕಾಲದಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ದೇಣಿಗೆ ಕಳ್ಳತನ ಬೆಳಕಿಗೆ ಬಂದ ನಂತರ 10 ಮತ್ತು 20 ರೂ. ಮುಖಬೆಲೆಯ ನೋಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾದ ಕಾರಣ, ದೇವಾಲಯದಲ್ಲಿ ಎಣಿಕೆ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಮತ್ತು ಕಠಿಣವಾಗಿದೆ. ಸಮಯ ಬದಲವಾಣೆ ಮತ್ತು ಯಾವುದೇ ಸಂಬಳ ಹೆಚ್ಚಳವಿಲ್ಲದ ಕಾರಣ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಸಿಬ್ಬಂದಿಯೊಬ್ಬರ ಪ್ರಕಾರ, ಈ ಮೊದಲು 500 ರೂ. ನೋಟುಗಳ 70 ರಿಂದ 80 ಸ್ಟ್ಯಾಕ್‌ಗಳನ್ನು ಸಿದ್ಧಪಡಿಸುತ್ತಿದ್ದರು, ಇದರಿಂದಾಗಿ ಎಣಿಕೆ ತ್ವರಿತವಾಗಿ ಪೂರ್ಣಗೊಳ್ಳುತ್ತಿತ್ತು. ಈಗ, ಅವರು 500 ರೂ. ನೋಟುಗಳ 15 ಬಂಡಲ್‌ಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಎಣಿಕೆ ಸಿಬ್ಬಂದಿಗಳ ಕೆಲಸ ಎರಡು ಪಾಳಿಯಲ್ಲಿ ನಡೆಯುತ್ತಿತ್ತು. ಪ್ರತಿಯೊಬ್ಬ ಸಿಬ್ಬಂದಿ ಹಿಂದೆ ಆರು ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಈಗ ಈ ವ್ಯವಸ್ಥೆಯನ್ನು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಒಂದೇ ಪಾಳಿಗೆ ಬದಲಾಯಿಸಲಾಗಿದೆ. ಅವರ ಸಂಬಳದಲ್ಲಿ ಯಾವುದೇ ಬದಲಾವಣೆಯಾಗಿಲ್ಲದಿದ್ದರೂ, ಅವರ ಕೆಲಸದ ಸಮಯವನ್ನು ಹೆಚ್ಚಿಸಿದ್ದರಿಂದ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net