ಸೌದಿ ಅರೇಬಿಯಾಗೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನದ ಇಂಜಿನ್​ನಲ್ಲಿ ತಾಂತ್ರಿಕ ದೋಷ: ವಾಪಾಸ್ ಆದ ವಿಮಾನ | Air India flight

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ತಿರುವನಂತಪುರಂ: ಕೇರಳದಿಂದ ಸೌದಿ ಅರೇಬಿಯಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನದ(Air India flight) ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡು ಬಳಿಕ ಟೇಕ್ ಆಫ್ ಆದ ಎರಡು ಗಂಟೆಯೊಳಗೆ ವಾಪಸ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ವರದಿಯಾಗಿದೆ.
ಕಣ್ಣೂರು ಏರ್​ಪೋರ್ಟ್​ನಿಂದ ಸೌದಿ ಅರೇಬಿಯಾದ ಪ್ರಮುಖ ನಗರವಾದ ಜೆಡ್ಡಾಗೆ 180 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಮಾನವು ಇಂದು ಬೆಳಿಗ್ಗೆ 7.40ಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಎಂಜಿನ್ ಸಂಬಂಧಿತ ದೋಷದಿಂದ ವಾಪಸ್ ನಿಲ್ದಾಣಕ್ಕೆ ಬಂದಿದೆ ಎನ್ನಲಾಗಿದೆ.
ವಿಮಾನದ ಪ್ರಯಾಣದ ಸುಮಾರು ಎರಡು ಗಂಟೆಗಳ ಬಳಿಕ ಬಳಿಕ, ಪೈಲಟ್‌ಗಳು ಎಂಜಿನ್ ಎಚ್ಚರಿಕೆ ಬೆಳಕನ್ನು ಗಮನಿಸಿ ಮುನ್ನೆಚ್ಚರಿಕೆಯಾಗಿ ವಾಪಸ್ ನಿಲ್ದಾಣಕ್ಕೆ ಬರಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ನಿಲ್ದಾಣದ ಅಧಿಕಾರಿಗಳು, ವಿಮಾನ ಕಣ್ಣೂರಿನಲ್ಲಿ ಸುರಕ್ಷಿತವಾಗಿ ಇಳಿಯಿತು, ಮತ್ತು ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ತಪಾಸಣೆಗಳಲ್ಲಿ ವಿಮಾನದ ಇಂಧನ ಫಿಲ್ಟರ್‌ನಲ್ಲಿ ಸಮಸ್ಯೆ ಕಂಡುಬಂದಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net