ನಿಯಂತ್ರಣ ತಪ್ಪಿ ನೀರಿಗೆ ಬಿದ್ದ ವಾಯುಪಡೆ ವಿಮಾನ; ಮುಂದುವರಿದ ಸುರಕ್ಷಾ ಕಾರ್ಯಚರಣೆ | Aircraft

ಕೊಳದಲ್ಲಿ ಬಿದ್ದಿರುವ ವಾಯುಪಡೆ ವಿಮಾನ
ಕೊಳದಲ್ಲಿ ಬಿದ್ದಿರುವ ವಾಯುಪಡೆ ವಿಮಾನ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಯಾಗರಾಜ್​ನಲ್ಲಿ ಸೇನಾ ವಿಮಾನ ಪತನ
  • ಸ್ವಲ್ಪ ಸಮಯ ಗಾಳಿಯಲ್ಲಿ ಸುತ್ತಿ ಕೊನೆಗೆ ನೀರಿಗೆ ಬಿದ್ದ ವಿಮಾನ
  • ಮಾಹಿತಿ ದೊರೆತ ನಂತರ ಸ್ಥಳಕ್ಕೆ ಬಂದಿರುವ ಎನ್​ಡಿಆರ್​ಎಫ್​, ಅಗ್ನಿಶಾಮಕ ದಳ
ಪ್ರಯಾಗ್‌ರಾಜ್‌: ಬುಧವಾರ (ಜ.21) ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಣ್ಣ ವಿಮಾನ(Aircraft)ವೊಂದು ಹಠಾತ್ತನೆ ಸಮತೋಲನ ಕಳೆದುಕೊಂಡು ನಗರದ ಕೊಳಕ್ಕೆ ಅಪ್ಪಳಿಸಿದ ದುರಂತ ಘಟನೆ ಸಂಭವಿಸಿದೆ.
ಮಾಹಿತಿಯ ಪ್ರಕಾರ, ವಿಮಾನವು ಕೆಪಿ ಇಂಟರ್ ಕಾಲೇಜಿನ ಹಿಂದೆ ಇರುವ ನೀರಿನಲ್ಲಿ ಬಿದ್ದಿದೆ ಎಂದು ವರದಿಯಾಗಿದೆ. ಇದು ಭಾರತೀಯ ವಾಯುಪಡೆಯ ಮೈಕ್ರೋಲೈಟ್ ವಿಮಾನವಾಗಿದ್ದು, ಅಪಘಾತಕ್ಕೆ ಕಾರಣವೇನು ಎನ್ನುವುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ವಿವರಗಳ ಪ್ರಕಾರ, ಎಂಜಿನ್ ವೈಫಲ್ಯದಿಂದಾಗಿ ವಿಮಾನವು ಕೊಳಕ್ಕೆ ಅಪ್ಪಳಿಸಿ, ಸ್ವಲ್ಪ ಸಮಯದವರೆಗೆ ಗಾಳಿಯಲ್ಲಿ ಸುತ್ತುತ್ತಾ ಕೊನೆಗೆ ನೀರಿಗೆ ಬಿದ್ದಿದೆ.ಸಶಸ್ತ್ರ ಪಡೆಗಳ ಪ್ರಕಾರ, ವಿಮಾನದಲ್ಲಿ ಇಬ್ಬರು ಸಿಬ್ಬಂದಿಗಳಿದ್ದು, ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿವೆ.

ಪ್ರತ್ಯಕ್ಷದರ್ಶಿಗಳು ಏನೆಂದರು?

ವಿಮಾನ ಪತನವಾಗುವುದನ್ನು ಕಣ್ಣಾರೆ ಕಂಡ ಸ್ಥಳೀಯರು, ಸಣ್ಣ ಗಾತ್ರದ ವಿಮಾನವೊಂದು ಗಾಳಿಯಲ್ಲಿ ನಿಯಂತ್ರಣ ಕಳೆದುಕೊಂಡು ಕೊಳದೊಳಗೆ ಮುಳುಗಿತು ಎಂದು ಹೇಳಿದ್ದಾರೆ. ನಂತರ ಸ್ಥಳಕ್ಕೆ ಜನರು ಬಂದಾಗ ಕೊಳದಿಂದ ದಟ್ಟವಾದ ಹೊಗೆ ಬರಲಾರಂಭಿಸಿದೆ. ಘಟನೆ ಕುರಿತು ಮಾಹಿತಿ ದೊರೆತ ನಂತರ ಎನ್​ಡಿಆರ್​ಎಫ್​, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳವನ್ನು ಸುತ್ತುವರೆದ್ದಿದ್ದಾರೆ.

ಚೆನ್ನೈನಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ

ಕಳೆದ ವರ್ಷ ನವೆಂಬರ್‌ನಲ್ಲಿ ಚೆನ್ನೈನ ಚೆಂಗಲ್ಪಟ್ಟು ಜಿಲ್ಲೆಯ ತಾಂಬರಂ ಬಳಿ ಮತ್ತೊಂದು ಭಾರತೀಯ ವಾಯುಪಡೆಯ ವಿಮಾನ ಪತನಗೊಂಡ ತಿಂಗಳುಗಳ ನಂತರ ಈ ಅಪಘಾತ ಸಂಭವಿಸಿದೆ. 'ಪಿಲಾಟಸ್ ಪಿಸಿ-7' ತರಬೇತಿ ವಿಮಾನವು ಪತನಗೊಂಡಾಗ ನಿಯಮಿತ ತರಬೇತಿ ಕಾರ್ಯಾಚರಣೆಯಲ್ಲಿತ್ತು, ಆದರೆ ಪೈಲಟ್ ಸುರಕ್ಷಿತವಾಗಿ ಹೊರಹೋಗುವಲ್ಲಿ ಯಶಸ್ವಿಯಾಗಿದ್ದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net