ರಸ್ತೆಯಲ್ಲಿ ಇ-ಸಿಗರೇಟ್ ಸೇದಿದ ಬಾಲಕ; ಇದಕೆಲ್ಲಾ ರಿಯಾನ್​ ಪರಾಗ್​ ಕಾರಣ; ವೈರಲ್​ ವಿಡಿಯೋಗೆ ನೆಟ್ಟಿಗರ ಆಕ್ರೋಶ! E Cigarette

ಈಗ ರಸ್ತೆಯಲ್ಲಿ ವೇಪ್​ ಸೇದುತ್ತಿರುವ ಬಾಲಕನ ವಿಡಿಯೋ ವೈರಲ್​
ಈಗ ರಸ್ತೆಯಲ್ಲಿ ವೇಪ್​ ಸೇದುತ್ತಿರುವ ಬಾಲಕನ ವಿಡಿಯೋ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ ಪಂದ್ಯದಲ್ಲಿ ಇ-ಸಿಗರೇಟ್​ ಸೇದಿದ ರಿಯಾನ್​ ಪರಾಗ್​
  • ಈಗ ರಸ್ತೆಯಲ್ಲಿ ವೇಪ್​ ಸೇದುತ್ತಿರುವ ಬಾಲಕನ ವಿಡಿಯೋ ವೈರಲ್​
  • ಇದಕ್ಕೆ ಕ್ರಿಕೆಟ್​ ಆಟಗಾರನೇ ಕಾರಣ ಎಂದ ನೆಟ್ಟಿಗರು
ವೈರಲ್​: ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಇ- ಸಿಗರೇಟ್​ (E Cigarette) ಅಥವಾ ವೇಪ್​ ಕುರಿತಾದ ಚರ್ಚೆ ಮುನ್ನಲೆಗೆ ಬಂದಿದೆ. ಏಪ್ರಿಲ್ 28 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ ನಾಯಕ ರಿಯಾನ್​ ಪರಾಗ್​ ಈ ಕೆಲಸವನ್ನು ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಈದೀಗ ಸರಿಯಾಗಿ 18 ವರ್ಷವನ್ನು ದಾಟದ ಹುಡುಗನೊಬ್ಬ ರಸ್ತೆಯಲ್ಲಿ ನಿಷೇಧಿತ ಇ-ಸಿಗರೇಟನ್ನು ಸೇದುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ (Viral Video) ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ಹೆಚ್ಚು ಕಡಿಮೆ 14-15 ವಯಸ್ಸಿನ ಬಾಲಕನೊಬ್ಬ ಕೈಯಲ್ಲಿ ಇ-ಸಿಗರೇಟ್​ (ವೇಪ್​) ನ್ನು ಬಾಯಲ್ಲಿ ಇಟ್ಟುಕೊಂಡು ಹೊಗೆ ಬೀಡುತ್ತಿರುವುದನ್ನು ನೋಡಬಹುದಾಗಿದೆ. ಈ ಕೆಲಸವನ್ನು ಬಾಲಕ ಯಾವುದೋ ಗಪ್ತ ಸ್ಥಳದಲ್ಲಿ ಅಲ್ಲ; ನೂರಾರು ವಾಹನಗಳು ಮತ್ತು ಸಾರ್ವಜನಿಕರು ಓಡಾಡುವ ರಸ್ತೆಯಲ್ಲೇ ಸೇದುತ್ತಾ ನಿಂತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ನೆಟ್ಟಿಗರು ಏನಂತಾರೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರ ಪಿತ್ತ ನೆತ್ತಿಗೇಡರಿದೆ. ಈ ವಿಡಿಯೋ ನೋಡಿದರೆ, ಯಾರೋ ಈ ಹುಡುಗನಿಗೆ ಸಿಗರೇಟನ್ನು ಕೊಟ್ಟು ಸೇದು ಎಂಬತಿದೆ ಎಂದು ಒಬ್ಬರು ಅನುಮಾನ ವ್ಯಕ್ತ ಪಡಿಸಿದ್ದರೆ.
ನನ್ನ ಪ್ರಕಾರ ಈ ಬಾಲಕ, ಆ ರಿಯಾನ್​ ಪರಾಗ್​ನನ್ನೇ ಅನುಕರಣೆ ಮಾಡಿದ್ದಾನೆ ಅನ್ನಿಸುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. ನಮ್ಮ ದೇಶದಲ್ಲಿ ಕಾನೂನಿಗೆ ಬೆಲೆಯೇ ಇಲ್ಲವಾಗಿದೆ ಎಂದು ಮತ್ತೊಬ್ಬರು ಆಕ್ರೋಶವನ್ನು ಹೊರಹಾಕಿದ್ದಾರೆ.

ರಿಯಾನ್​ನಿಂದ ವೇಪಿಂಗ್​!

ಏಪ್ರಿಲ್​ 28 ರಂದು, ಪಂಜಾಬ್​ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ 19 ನೇ ಸಾಲಿನ ಐಪಿಎಲ್​ನ 40 ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡ, ಪಂಜಾಬ್​ ಕಿಂಗ್ಸ್​ ತಂಡವನ್ನು ಸೋಲಿಸುವ ಮೂಲಕ ಪಂಜಾಬ್​ನ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿತು.
ಆದರೆ ಇದೇ ಪಂದ್ಯಾವಳಿಯಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ ನಾಯಕ ರಿಯಾನ್​ ಪರಾಗ್​ ಡ್ರೆಸಿಂಗ್​ ರೂಮ್​ನಲ್ಲಿ ವೇಪ್​ (ಇಲೆಕ್ಟ್ರಾನಿಕ್​ ಸಿಗರೇಟ್​) ಸೇದುತ್ತಿರುವ ದೃಶ್ಯವೊಂದು ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಈ ಘಟನೆಯಿಂದ ಎಚ್ಚೆತ್ತ ಬಿಸಿಸಿಐ, ರಿಯಾನ್​ ಪರಾಗ್​ಗೆ ಪಂದ್ಯದ ಶೇ. 25 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸುವಂತೆ ಹೇಳಿತ್ತು. ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎನ್ನುವುದು, ಬಿಸಿಸಿಐನ ವಾಗ್ದಾನವಾಗಿದೆ.

ಕಾನೂನು ಏನು ಹೇಳುತ್ತದೆ?

ಭಾರತ ಸರ್ಕಾರವು 2019ರಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA - Prohibition of Electronic Cigarettes Act) ಅಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕಾಯ್ದೆಯ ಪ್ರಕಾರ, ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ ಮತ್ತು ತಯಾರಿಕೆ, ಆಮದು ಮತ್ತು ರಫ್ತು, ಸಂಗ್ರಹಣೆ ಮತ್ತು ಮಾರಾಟ ಅಂತೆಯೇ ಯಾವುದೇ ರೀತಿಯ ಜಾಹೀರಾತನ್ನು ಮಾಡುವಂತಿಲ್ಲ ಎಂಬ ನಿಯಮವಿದೆ.
ಮೊದಲ ಬಾರಿಗೆ ಈ ನಿಯಮಗಳನ್ನು ಮೀರಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ, ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಇ-ಸಿಗರೇಟ್ ಮತ್ತು ವೇಪ್‌ಗಳ ಸಂಗ್ರಹಣೆಯನ್ನು ಮಾಡಿದಲ್ಲಿ, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net