ಪತ್ನಿ, ಅತ್ತೆ-ಮಾವನ ಕಿರುಕುಳಕ್ಕೆ 20ರ ಯುವಕ ಬಲಿ: ಸಾಯುವ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ಕಣ್ಣೀರಿಟ್ಟ ಪತಿ! | SuicideCase

SuicideCase
SuicideCase
Published on

ಪ್ರಮುಖ ಮುಖ್ಯಾಂಶಗಳು

  • ಪತ್ನಿಯ ಕಿರುಕುಳಕ್ಕೆ ನೊಂದ ಯುವಕ ಆತ್ಮಹತ್ಯೆ
  • ಡೆತ್‌ನೋಟ್ ಬದಲು ವಿಡಿಯೋ ಮಾಡಿ ಗೆಳೆಯನಿಗೆ ಕಳುಹಿಸಿದ ದುರ್ದೈವಿ.
  • ಮನೆಯವರ ಟಾರ್ಚರ್‌ಗೆ ಬೇಸತ್ತು ಇಲಿ ಪಾಷಾಣ ಕುಡಿದು ಪ್ರಾಣಬಿಟ್ಟ ಪುಣೆಯ ವ್ಯಕ್ತಿ.
ಪುಣೆ: ಪತ್ನಿ ಹಾಗೂ ಅತ್ತೆ ಮನೆಯವರು ನೀಡಿದ ಎನ್ನಲಾದ ಸತತ ಮಾನಸಿಕ ಹಿಂಸೆ ಮತ್ತು ಕಿರುಕುಳಕ್ಕೆ ಬೇಸತ್ತು 20 ವರ್ಷದ ಯುವಕನೊಬ್ಬ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ(SuicideCase) ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಯುವಕ ತಾನು ಅನುಭವಿಸಿದ ನರಕಯಾತನೆಯನ್ನು ವಿಡಿಯೋ ಮಾಡಿ ಸ್ನೇಹಿತನಿಗೆ ಕಳುಹಿಸಿರುವುದು ಈಗ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಮೊಹಮ್ಮದ್ ಸಾದ್ ಆಸಿಫ್ ಸೈಯದ್ (20) ಎಂದು ಗುರುತಿಸಲಾಗಿದೆ. ಮೂಲತಃ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನವನಾದ ಸಾದ್, ಪುಣೆಯ ಜಾಂಬುಲ್ವಾಡಿ ಪ್ರದೇಶದಲ್ಲಿ ವಾಸವಾಗಿದ್ದನು. ಪತ್ನಿ ಕರೀಮುನ್ನಿಸಾ ಅಲಿಯಾಸ್ ನಿಶಾ ಖಾನ್ ಮತ್ತು ಆಕೆಯ ಕುಟುಂಬದವರೊಂದಿಗೆ ಸಾದ್ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ. ಪತ್ನಿ ಮತ್ತು ಅತ್ತೆ ಮನೆಯವರು ಸಾದ್‌ಗೆ ಸತತವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮನಕಲಕುವ ವಿಡಿಯೋ

ಗುರುವಾರ ಸಾದ್ ತನ್ನ ಮೊಬೈಲ್‌ನಲ್ಲಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ ತನಗೆ ನೀಡಲಾಗುತ್ತಿದ್ದ ಕಿರುಕುಳದ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದಾನೆ ಹಾಗೂ ಪತ್ನಿ ನಿಶಾ ಸೇರಿದಂತೆ ಏಳು ಜನರ ಹೆಸರನ್ನು ಪ್ರಸ್ತಾಪಿಸಿದ್ದಾನೆ. ಈ ವಿಡಿಯೋವನ್ನು ಮಾಲೆಗಾಂವ್‌ನಲ್ಲಿರುವ ತನ್ನ ಸ್ನೇಹಿತನಿಗೆ ಕಳುಹಿಸಿದ ತಕ್ಷಣ, ಆತ ಇಲಿ ಪಾಷಾಣ ಸೇವಿಸಿದ್ದಾನೆ.

ಪೊಲೀಸ್ ಕ್ರಮ

ಶುಕ್ರವಾರದಂದು ಪೊಲೀಸರು ಸಾದ್ ಪತ್ನಿ ಸೇರಿದಂತೆ ಏಳು ಜನರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ (Abetment to suicide) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ನಿಶಾ, ಸರ್ವರ್ ಅಲಿಯಾಸ್ ಕೈಫ್ ಖಾನ್, ರೇಷ್ಮಾ ಕಮ್ರುಖಾನ್, ಶಮಾ ಜಾವೇದ್ ಶೇಖ್, ಜಾವೇದ್ ಶೇಖ್, ಅಥರ್ವ ಕಾಳೆ ಮತ್ತು ಇಶಿತಾ ಎಂಬುವವರ ಹೆಸರನ್ನು ಉಲ್ಲೇಖಿಸಲಾಗಿದೆ.
"ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಡಿಯೋದ ವಿಧಿವಿಜ್ಞಾನ ಪರೀಕ್ಷೆಗಾಗಿ (Forensic Examination) ಸಾದ್‌ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ," ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net