ISI ನಂಟಿದ್ದ 8 ಉಗ್ರರ ಬಂಧನ: ದೆಹಲಿ ಬಾಂಬ್ ಬ್ಲಾಸ್ಟ್ ಮಾದರಿಯಲ್ಲೇ ಅಟ್ಯಾಕ್ ಮಾಡಲು ಪ್ಲಾನ್? Terrorist Arrest

ಆರೋಪಿತ ಉಗ್ರರರ ಜತೆಗೆ ಪೊಲೀಸರು
ಆರೋಪಿತ ಉಗ್ರರರ ಜತೆಗೆ ಪೊಲೀಸರು
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ಲಷ್ಕರ್​-ಎ- ತೊಯ್ಬಾ ಜತೆ ಸಂಪರ್ಕ ಹೊಂದಿದ್ದ 8 ಜನರ ಬಂಧನ
  • ತಮಿಳು ನಾಡಿನಲ್ಲಿ ಆರು ಮತ್ತು ಪಶ್ಚಿಮ ಬಂಗಾಳದಲ್ಲಿ ಇಬ್ಬರ ಬಂಧನ
  • ಬಂಧಿತ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ದೆಹಲಿ ಪೊಲೀಸರು
ನವದೆಹಲಿ: ಪಾಕಿಸ್ತಾನದ ಐಎಸ್​ಐ ಮತ್ತು ಬಾಂಗ್ಲಾದೇಶದ ಉಗ್ರವಾದ ಸಂಘಟನೆಗಳ ಜತೆಗೆ ಸಂಪರ್ಕ ಹೊಂದಿದ್ದ 8 ಜನರನ್ನು ಭಾನುವಾರ (ಫೆ.22) ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಂದಿಸಲಾಗಿದೆ (Terrorist Arrest) ಎಂದು ವರದಿಯಾಗಿದೆ.
ಬಂಧಿತ ಆರೋಪಿಗಳು ಭಾರತದಲ್ಲಿ ವಿಧ್ವಂಸಕ ಕೃತ್ಯವನ್ನು ನಡೆಸಲು ಹೊಂಚು ಹಾಕುತ್ತಿದ್ದರು ಎಂಬ ನಿಖರ ಮಾಹಿತಿಯ ಮೇರೆಗೆ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಿಜಾನುರ್ ರೆಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂಬ ಆರು ಜನ ಆರೋಪಿಗಳನ್ನು ತಮಿಳುನಾಡಿನ ತಿರುಪ್ಪುರ್​ನಿಂದ ಬಂಧಿಸಿದರೆ, ಉಳಿದ ಇಬ್ಬರು ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಕೆಲವೊಬ್ಬರು ಬಾಂಗ್ಲಾದೇಶದ ನಿವಾಸಿಗಳಾಗಿದ್ದು, ಅವರು ಭಾರತದಲ್ಲಿ ಅಕ್ರಮವಾಗಿ ವಾಸವಿದ್ದರೆಂದು ಪೊಲೀಸ್​ ಮೂಲಗಳು ತಿಳಿಸಿವೆ. ಬಂಧಿತ ಆರೋಪಿಗಳಿಗೆ ಪಾಕಿಸ್ತಾನ ಉಗ್ರ ಸಂಘಟನೆ ಲಷ್ಕರ್​-ಎ- ತೊಯ್ಬಾ ಜತೆ ನಂಟಿದ್ದ ಬಗ್ಗೆ ಮಾಹಿತಿಯಿದ್ದು, ವಿಚಾರಣೆ ಬಳಿಕ ಸತ್ಯಾಂಶ ಹೊರ ಬೀಳಲಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 8 ಮೊಬೈಲ್​ ಫೋನ್​, 16 ಸಿಮ್​ ಕಾರ್ಡ್​ಗಳು, ಫ್ರೀ ಕಾಶ್ಮೀರ ಪೋಸ್ಟರ್​ಗಳು, ನಕಲಿ ಆಧಾರ್​ ಕಾರ್ಡ್​ಗಳು ಮತ್ತು ಧಾರ್ಮಿಕ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಈ ಬಂಧಿತರು ಭಾರತದ ಪ್ರಮುಖ ನಗರಗಳಲ್ಲಿ ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಐಇಡಿ ಬ್ಲಾಸ್ಟ್​ ರೀತಿಯಲ್ಲಿಯೇ, ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದರು ಎಂದು ಹೇಳಲಾಗುತ್ತಿದೆ.
ಕೆಲವು ದಿನದ ಹಿಂದೆಯಷ್ಟೇ ದೆಹಲಿಯ ಕೆಂಪು ಕೋಟೆ ಸುತ್ತಲಿನ ಪ್ರದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಾಗಿ ಲಷ್ಕರ್​-ಎ- ತೊಯ್ಬಾ ಬೆದರಿಕ ಒಡ್ಡಿದ ಬಳಿಕ ಈ ಎಂಟು ಜನರ ಬಂಧನವಾಗಿದ್ದು, ಮುಂದೆ ನಡೆಯಲಿದ್ದ ಅಪಾಯವನ್ನು ತಡೆದಿದ್ದೆವೆ ಎಂದು ದೆಹಲಿ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net