ಮುಂಬೈ-ಪುಣೆ, ಚೆನ್ನೈ-ಬೆಂಗಳೂರು ಸೇರಿದಂತೆ 7 ಹೈಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ | Union Budget 2026

ನಿರ್ಮಲಾ ಸೀತಾರಾಮನ್​
ನಿರ್ಮಲಾ ಸೀತಾರಾಮನ್​
Published on

ಪ್ರಮುಖ ಮುಖ್ಯಾಂಶಗಳು

  • 9ನೇ ಬಾರಿಗೆ ದಾಖಲೆಯ ಬಜೆಟ್​ ಮಂಡಿಸಿದ ವಿತ್ತ ಸಚಿವೆ
  • 12 ವರ್ಷದಿಂದ ದೇಶದ ಆರ್ಥಿಕತೆ ಸುಧಾರಣೆ ಎಂದ ನಿರ್ಮಲಾ ಸೀತಾರಾಮನ್​
  • ರೈಲ್ವೇ ಇಲಾಖೆಗೆ ಮಹತ್ವದ ಕೊಡುಗೆಗಳನ್ನೇ ನೀಡಿದ ಕೇಂದ್ರ
  • 7 ಹೈಸ್ಪೀಡ್​ ರೈಲು ಕಾರಿಡಾರ್​ಗಳನ್ನು ಘೋಷಣೆ
Union Budget 2026: ಸತತ 9ನೇ ಬಾರಿಗೆ 2026-27ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಮಧ್ಯಮವರ್ಗದವರ ನಿರೀಕ್ಷೆ, ಆಶೋತ್ತರಗಳಿಗೆ ಮತ್ತು ದೇಶದ ರೈತರ ಮೇಲಿರುವ ಹೊರೆ ಇಳಿಸಲಿದ್ದಾರೆಯೇ ಎಂಬ ಹಲವು ನಿರೀಕ್ಷೆಗಳಿಗೆ ಕಡೆಗೂ ಇಂದಿನ ಬಜೆಟ್​ನಲ್ಲಿ ತೆರೆ ಬಿದ್ದಿದೆ.

ರೈಲ್ವೇ ಇಲಾಖೆಗೆ ಸಿಕ್ಕಿದ್ದೇನು?

7 ಹೈಸ್ಪೀಡ್​ ರೈಲ್ವೆ ಕಾರಿಡಾರ್​ಗಳನ್ನು ಘೋಷಿಸಿದ ನಿರ್ಮಲಾ ಸೀತಾರಾಮನ್​, ಇವುಗಳನ್ನು 'ಗ್ರೋತ್​ ಕನೆಕ್ಟರ್ಸ್' ಎಂದು ಉಲ್ಲೇಖಿಸಿದ್ದು ವಿಶೇಷ. ಈ ಕಾರಿಡಾರ್‌ಗಳು ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಆಗಿವೆ.

ಪ್ರಯಾಣದ ಸಮಯ ಇನ್ನಷ್ಟು ಕಡಿತ

ಈ ಮಾರ್ಗಗಳು ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳನ್ನು ವೇಗವಾಗಿ ಸಂಪರ್ಕಿಸುವ ನಿರೀಕ್ಷೆಯಿದೆ. ಪ್ರಯಾಣದ ಸಮಯವನ್ನು ಕಡಿತಗೊಳಿಸುವುದರ ಜತೆಗೆ ಟ್ರಾಫಿಕ್​ ಸಮಸ್ಯೆಗಳು ಹಾಗೂ ಜನರ ಪ್ರಯಾಣದ ಸಮಯವನ್ನು ಉಳಿಸಲಿದೆ.
2027ನೇ ಹಣಕಾಸು ವರ್ಷಕ್ಕೆ ಸಾರ್ವಜನಿಕ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿ ರೂ.ಗೆ ಪ್ರಸ್ತಾಪಿಸಿದ ಬೆನ್ನಲ್ಲೇ ಹೈಸ್ಪೀಡ್ ರೈಲು ಘೋಷಣೆ ಹೊರಬಿದ್ದಿದ್ದು, ಇದು 2026ನೇ ಹಣಕಾಸು ವರ್ಷದ ಬಜೆಟ್ ಅಂದಾಜಿನಲ್ಲಿ 11.2 ಲಕ್ಷ ಕೋಟಿ ರೂ. ಆಗಿತ್ತು ಎಂಬುದು ಇಲ್ಲಿ ಗಮನಾರ್ಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net