ಇಂದು ಅಸ್ಸಾಂನ ಏಳು ಜಿಲ್ಲೆಗಳಾದ ಧುಬ್ರಿ, ಬಾರ್ಪೇಟಾ, ದರ್ರಾಂಗ್, ಮೋರಿಗಾಂವ್, ಬೊಂಗೈಗಾಂವ್, ನಾಗಾಂವ್ ಮತ್ತು ಗೋಲ್ಪಾರಗಳಲ್ಲಿ ನುಸುಳುಕೋರರು ಪ್ರಾಬಲ್ಯವನ್ನು ಹೊಂದಿದ್ದಾರೆ. ಇವರು ಇಷ್ಟು ಶಕ್ತಿವಂತರಾಗಲು ಇಪ್ಪತ್ತು ವರ್ಷಗಳ ಕಾಂಗ್ರೆಸ್ ಆಡಳಿತವೇ ಕಾರಣವಾಗಿದ್ದು, ನನಗೆ ಲಭ್ಯವಿರುವ ಮಾಹಿತಿ ಪ್ರಕಾರ ಈ ಜಿಲ್ಲೆಗಳಲ್ಲಿ ಸುಮಾರು 64 ಲಕ್ಷದಷ್ಟು ನುಸುಳುಕೋರರಿದ್ದಾರೆ ಎಂದು ಅವರು ಹೇಳಿದರು.