ದುಬೈನಲ್ಲಿ ಸಿಕ್ಕಿಬಿದ್ದ 6,000 ಕೋಟಿ ಡ್ರಗ್ಸ್ ಕಿಂಗ್‌ಪಿನ್! ವೀರೇಂದರ್​​ ಬೈಸೋಯಾ ಭಾರತಕ್ಕೆ ಹಸ್ತಾಂತರ! Virender Baisoya

ವೀರೇಂದ್ರ ಬೈಸೋಯಾ ಭಾರತಕ್ಕೆ ಹಸ್ತಾಂತರ
ವೀರೇಂದ್ರ ಬೈಸೋಯಾ ಭಾರತಕ್ಕೆ ಹಸ್ತಾಂತರ
Published on

ಪ್ರಮುಖ ಮುಖ್ಯಾಂಶಗಳು

  • ದುಬೈನಲ್ಲಿ ಸಿಕ್ಕಿಬಿದ್ದ 6,000 ಕೋಟಿ ರೂ. ಮೌಲ್ಯದ ಡ್ರಗ್ಸ್ ದಂಧೆಯ ಕಿಂಗ್‌ಪಿನ್
  • ಇಂಟರ್ಪೋಲ್ ಹಾಗೂ ಭಾರತೀಯ ತನಿಖಾ ಸಂಸ್ಥೆಗಳ ಮಹತ್ವದ ಕಾರ್ಯಾಚರಣೆ
  • ವೀರೇಂದ್ರ ಬೈಸೋಯಾ ಭಾರತಕ್ಕೆ ಹಸ್ತಾಂತರ
ನವದೆಹಲಿ: ಪುಣೆಯ 6,000 ಕೋಟಿ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಡ್ರಗ್​ ಲಾರ್ಡ್​ ವೀರೇಂದರ್​​ ಬೈಸೋಯಾ (Virender Baisoya) ನನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರ ನಡೆಯಲಿದೆ ಎಂದು ತಿಳಿದು ಬಂದಿದೆ. ಇತನನ್ನು ದುಬೈ ಪೊಲೀಸರು ಬಂಧಿಸಿದ್ದು, ಈಗ ಭಾರತದಲ್ಲಿ ಇತನ ವಿಚಾರಣೆ ನಡೆಯಲಿದೆ.
ಈ ವೀರೇಂದರ್​​ ಬೈಸೋಯಾ, ಪಾಕಿಸ್ತಾನ ಹಾಗೂ ದುಬೈನಲ್ಲಿ ಡ್ರಗ್ಸ್​ ದಂದೆಯಲ್ಲಿ ತೊಡಗಿರುವ ಸಂದೀಪ್ ಧುನಿಯಾನ ಸಹಚರನಾಗಿದ್ದು, ಇತನ ಮೇಲೆ ಭಾರತದ ಗುಪ್ತಚರ ಇಲಾಖೆ ಕಳೆದ ಕೆಲ ವರ್ಷಗಳಿಂದ ಕಣ್ಣಿಟ್ಟಿದ್ದು, ದುಬೈ ಪೊಲೀಸರು ಇವನ್ನು ವಶಕ್ಕೆ ಪಡೆದ ನಂತರ ಭಾರತ, ಇವನನ್ನು ಮರಳಿಸುವಂತೆ ಕೇಳಿತ್ತು.

ನುಡಿದಂತೆ ನಡೆದ ಅಮಿತ್​ ಷಾ!


ಇತ್ತೀಚೆಗೆ ದೇಶದಲ್ಲಿ ನಕ್ಸಲೀಸಂ ಅನ್ನು ಸಮಾಪ್ತಿಗೊಳಿಸಿ ಸಭೆಯೊಂದರಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಷಾ, ಇಂದು ದೇಶದಲ್ಲಿ ವಾಮಪಂಥಿಗಳು ಸರ್ವನಾಶವಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮಾದಕ ದ್ರವ್ಯಗಳ ವಿರುದ್ಧ ಇರಲಿದೆ ಎಂದು ತಿಳಿಸಿದ್ದರು.

ಈ ಮಾದಕ ವಸ್ತುಗಳು ವಿದೇಶಗಳಿಂದ ಭಾರತಕ್ಕೆ ಬರುತ್ತಿವೆ. ಇಲ್ಲಿಯ ಕೆಲ ಮಾಫಿಯಾಗಳು ಈ ದಂದೆಯನ್ನು ನಡೆಸುತ್ತಿದ್ದು, ಶೀಘ್ರದಲ್ಲಿ ಈ ಡ್ರಗ್ಸ್​ ದಂದೆಗೆ ಕಡಿವಾಣ ಹಾಕುವುದಾಗಿ ಅವರು ಭರವಸೆ ನೀಡಿದ್ದರು. ಈಗ ಸುಮಾರು 6 ಸಾವಿರ ಕೋಟಿ ಡ್ರಗ್ಸ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಸೋಯಾ, ಬಂಧನ ಎನ್​ಸಿಬಿ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಗಿದೆ ಎಂದರೆ ಸುಳ್ಳಲ್ಲ

, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net