30 ನಿಮಿಷ ಲಿಫ್ಟ್‌ನಲ್ಲಿ 5 ವರ್ಷದ ಬಾಲಕಿ! ಮಗಳ ಅಳು ಕೇಳಿ ಪರದಾಡಿದ ತಾಯಿ | 5-year-old girl in the elevator

ಲಿಫ್ಟ್‌ನಲ್ಲಿ ಸಿಲುಕಿದ್ದ ಬಾಲಕಿ
ಲಿಫ್ಟ್‌ನಲ್ಲಿ ಸಿಲುಕಿದ್ದ ಬಾಲಕಿ
Published on

ಪ್ರಮುಖ ಮುಖ್ಯಾಂಶಗಳು

  • 30 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ್ದ 5 ವರ್ಷದ ಬಾಲಕಿ
  • ಕತ್ತಲೆಯಿಂದ ಭಯಗೊಂಡು ಜೋರಾಗಿ ಅಳುತ್ತಿದ್ದ ಮಗು
  • ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿ ನಡೆದ ಆತಂಕಕಾರಿ ಘಟನೆ
ಗ್ರೇಟರ್ ನೋಯ್ಡಾ: ಲಿಫ್ಟ್‌ನಲ್ಲಿ ಸಿಲುಕಿದ್ದ 5 ವರ್ಷದ ಬಾಲಕಿಯೊಬ್ಬಳು ಸುಮಾರು 30 ನಿಮಿಷಗಳ ಕಾಲ ಆತಂಕ ಮೂಡಿಸಿದ್ದ ಘಟನೆ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿ ನಡೆದಿದೆ. ಬಾಲಕಿ ಗಾಬರಿಗೊಂಡು ಅಳುವ ಧ್ವನಿ ಹೊರಗೆ ಕೇಳುತ್ತಿದ್ದರೂ, ಅಸಹಾಯಕರಾಗಿ ಪೋಷಕರು ಪರದಾಡಿದ ದೃಶ್ಯ ನೋಡುಗರ ಮನಕಲಕುವಂತಿದೆ.
ಹೆರಿಟೇಜ್ ಹೋಮ್ಸ್ ಸೊಸೈಟಿಯ ಬಹುಮಹಡಿ ಕಟ್ಟಡದಲ್ಲಿ ಬಾಲಕಿ ತನ್ನ ಆಯಾಳೊಂದಿಗೆ ಲಿಫ್ಟ್‌ನಲ್ಲಿ ಹೋಗುತ್ತಿದ್ದಳು. ಈ ವೇಳೆ ವಿದ್ಯುತ್ ಕಡಿತವಾಗಿದ್ದು, 12 ಮತ್ತು 13ನೇ ಮಹಡಿಗಳ ನಡುವೆ ಲಿಫ್ಟ್ ಇದ್ದಕ್ಕಿದ್ದಂತೆ ನಿಂತಿದೆ. ಲಿಫ್ಟ್‌ನೊಳಗೆ ಕತ್ತಲೆ ಪೂರ್ತಿ ಇದ್ದದ್ದರಿಂದ ಬಾಲಕಿಗೆ ಭಯವಾಗಿ ಜೋರಾಗಿ ಅಳಲು ಶುರುಮಾಡಿದ್ದಾಳೆ. ಆಯಾ ತಕ್ಷಣ ತುರ್ತು ಅಲಾರಾಂ ಒತ್ತಿದ್ದಾರೆ. 

ಮಗಳ ಅಳು ಕೇಳಿ ಚಡಪಡಿಸಿದ ಅಮ್ಮ

ಇನ್ನು, ವಿಷಯ ತಿಳಿದ ಮಗುವಿನ ಪೋಷಕರು ಸ್ಥಳಕ್ಕೆ ಓಡಿ ಬಂದಿದ್ದಾರೆ. ಲಿಫ್ಟ್‌ನ ಹೊರಗಿನಿಂದ ಮಗಳ ಅಳುವ ಧ್ವನಿ ಕೇಳುತ್ತಿದ್ದರೂ ಆಕೆಯನ್ನು ತಕ್ಷಣ ಹೊರತೆಗೆಯಲು ಸಾಧ್ಯವಾಗದೆ ತಾಯಿ ಚಡಪಡಿಸಿದ್ದಾಳೆ. ನಂತರ ಕಟ್ಟಡ ಸಿಬ್ಬಂದಿ, ನಿವಾಸಿಗಳು ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕೊನೆಗೂ ಲಿಫ್ಟ್ ಬಾಗಿಲು ತೆರೆದು ಬಾಲಕಿ ಹಾಗೂ ಆಯಾ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಅಸ್ವಸ್ಥಗೊಂಡ 

ಬಾಲಕಿ

ಬಾಲಕಿ ಭಯದಲ್ಲಿ ಅಸ್ವಸ್ಥಗೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಲಿಫ್ಟ್‌ಗಳ ನಿರ್ವಹಣೆ ಮತ್ತು ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ನಿವಾಸಿಗಳು ಪ್ರಶ್ನೆ ಎತ್ತಿದ್ದಾರೆ. ಮಗು ಅಳುವ ಆತಂಕದ ಕ್ಷಣಗಳನ್ನು ಕಂಡು ಕಟ್ಟಡ ಮಾಲಿಕರ ವಿರುದ್ದ ಜನ ಹರಿಹಾಯ್ದಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net