ಟಾಯ್ಲೆಟ್‌ನಲ್ಲಿ 22 ವರ್ಷದ ಮಹಿಳೆ ಶವ ಪತ್ತೆ; ಗಂಡ, ಮಗು ನಾಪತ್ತೆ | Woman's dead body in toilet

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ಶಹಬಾದ್ ಡೇರಿಯಲ್ಲಿ ವಿವಾಹಿತೆಯ ಶವ ಪತ್ತೆ
  • ಘಟನೆ ಬಳಿಕ ಮಹಿಳೆಯ ಪತಿ ಮತ್ತು ಮಗು ನಾಪತ್ತೆ
  • ಮಹಿಳೆಯ ಸಹೋದರನಿಂದ ಪೊಲೀಸರಿಗೆ ಮಾಹಿತಿ
ನವದೆಹಲಿ: ದೆಹಲಿಯಲ್ಲಿ 22 ವರ್ಷದ ಮಹಿಳೆಯೊಬ್ಬರು ಮನೆಯ ಟಾಯ್ಲೆಟ್‌ನಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಆತಂಕ ಮೂಡಿಸಿದೆ. ಶಹಬಾದ್ ಡೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ಮಹಿಳೆಯ ಪತಿ ಮತ್ತು ಮಗು ಕೂಡ ನಾಪತ್ತೆಯಾಗಿದ್ದಾರೆ.
ಮಾಹಿತಿ ಪ್ರಕಾರ, ಸಬಿಲಾ ಖತೂನ್ ಎಂದು ಗುರುತಿಸಲಾಗಿದೆ. ಸಬಿಲಾ ಅವರ ಸಹೋದರ ಮೊಹಮ್ಮದ್ ಗುಲಾಬ್ ಮನೆಗೆ ಬಂದಾಗ, ಸಹೋದರಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ ಮನೆಯಲ್ಲಿ ಅವರ ಪತಿ ಮೊಹಮ್ಮದ್ ಲಾಲ್ಬಾಬು ಹಾಗೂ ಮಗು ಇರಲಿಲ್ಲ. ಸಬಿಲಾ ಸುಮಾರು ಎರಡು ವರ್ಷಗಳ ಹಿಂದೆ ಮೊಹಮ್ಮದ್ ಲಾಲ್ಬಾಬು ಜತೆ ಮದುವೆಯಾಗಿದ್ದರು. ಬಳಿಕ ಇಬ್ಬರೂ ದೆಹಲಿಯ ಪ್ರಹ್ಲಾದ್‌ಪುರ ಬಂಗರ್ ಗ್ರಾಮದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ, ಮಗುವಿಗಾಗಿ ಹುಡುಕಾಟ

ಘಟನೆ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಬಿಲಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಶಹಬಾದ್ ಡೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಪತಿ ಹಾಗೂ ಮಗುವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಾವಿಗೆ ನಿಖರ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಮತ್ತು ಪೊಲೀಸ್​ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ಮುಂದುವರಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net