ವಿಶ್ವ ಬ್ಯಾಂಕ್ ಹಾಗೂ ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ ಅಂಕಿ-ಅಂಶಗಳ ಪ್ರಕಾರ, 2025ರಲ್ಲಿ ಭಾರತದ ನಿರುದ್ಯೋಗ (Unemployment) ದರ 3.1%ಕ್ಕೆ ಇಳಿದಿದೆ. ಇದು ಜಾಗತಿಕ ಸರಾಸರಿ 4.8%ಗಿಂತ ಕಡಿಮೆ. ಯುವಕರ ಉದ್ಯೋಗಾವಕಾಶ (Employment) ಹೆಚ್ಚಿಸಲು ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ವಿಶ್ವಕರ್ಮ ಯೋಜನೆ ಹಾಗೂ ಲಖ್ಪತಿ ದೀದಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆಂದು ಎಂದು ಮಾಂಡವೀಯಾ ಪ್ರತಿಪಾದಿಸಿದ್ದಾರೆ.