ಆತ್ಮವಿಶ್ವಾಸದ ತರಬೇತಿಯೂ ಕೆಲವರಿಗೆ ಉಪಯುಕ್ತವಾಗಬಹುದು. ಆದರೆ ಉದ್ದೇಶ ಕೋಪವನ್ನು ಮತ್ತಷ್ಟು ಹೊರಹಾಕುವುದು ಅಲ್ಲ, ಆಕ್ರಮಣಶೀಲರಾಗದೆ, ನಿಮ್ಮ ಮಾತನ್ನು ಗೌರವಯುತವಾಗಿ ಹೇಳುವುದನ್ನು ಕಲಿಯುವುದು. ಕೋಪವನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ ಆದರೆ, ಅದನ್ನು ನಿಯಂತ್ರಿಸಬಹುದು. ಜೀವನದಲ್ಲಿ ನಿರಾಶೆ, ನೋವು, ನಷ್ಟ, ಅನ್ಯಾಯ ಮತ್ತು ಅನಿರೀಕ್ಷಿತ ಘಟನೆಗಳು ಇದ್ದೇ ಇರುತ್ತವೆ. ಹಾಗಾಗಿ ಕೋಪವನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಸಾಧ್ಯವೂ ಅಲ್ಲ, ಅಗತ್ಯವೂ ಅಲ್ಲ. ಹೀಗಾಗಿ, ಒಂದು ಕ್ಷಣ ತಾಳ್ಮೆ, ಕೆಲವು ಆಳವಾದ ಉಸಿರಾಟ, ಆಲೋಚನೆಗೆ ಸ್ವಲ್ಪ ಸಮಯ, ಎದುರಿನ ವ್ಯಕ್ತಿಯ ಮಾತನ್ನು ಕೇಳುವ ಮನಸ್ಸ, ಇಷ್ಟೇ ಕೆಲವೊಮ್ಮೆ ದೊಡ್ಡ ಜಗಳವನ್ನೇ ತಪ್ಪಿಸಬಹುದು. ಕೋಪ ನಿಮ್ಮ ಕೈಯಲ್ಲಿದ್ದರೆ ಅದು ಒಂದು ಭಾವನೆ. ಕೋಪವೇ ನಿಮ್ಮನ್ನು ನಿಯಂತ್ರಿಸಲು ಆರಂಭಿಸಿದರೆ ಅದು ಸಮಸ್ಯೆ. ಆದ್ದರಿಂದ ಕೋಪ ನಿಮ್ಮನ್ನು ನಿಯಂತ್ರಿಸುವ ಮುನ್ನ, ಅದನ್ನು ನಿಯಂತ್ರಿಸುವುದನ್ನು ಕಲಿಯಿರಿ, (ಏಜೆನ್ಸೀಸ್).