ಮುಂಜಾನೆ ಮಾತ್ರ ಬ್ರೇಕ್ಫಾಸ್ಟ್ ತಪ್ಪಿಸಲೇ ಬಾರದು ಎನ್ನುವುದು ವೈದ್ಯರ ಸಲಹೆ. ಕೆಲಸ ಬ್ಯುಸಿ ಮಧ್ಯೆ ಬೆಳಗ್ಗಿನ ಆಹಾರ ಸೇವಿಸುವುದು ಅಕಸ್ಮಾತ್ ತಪ್ಪಿಸಿದರೆ, ಬಾಳೆ ಹಣ್ಣು ತಿನ್ನಬಹುದು, ಇದು ಹೆಚ್ಚಿನ ಶಕ್ತಿ ವರ್ಧಕವನ್ನು ನೀಡುತ್ತದೆ. ಗ್ಲೂಕೋಸ್, ಸುಕ್ರೋಸ್, ಪ್ರೊಸ್ಪರೋಸ್ ತಕ್ಷಣವೇ ನಿಮಗೆ ಶಕ್ತಿಯನ್ನು ನೀಡುತ್ತದೆ. ಆದರೆ, ಕೆಲವರಿಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿನ್ನುವುದು ಸರಿ ಹೊಂದಲ್ಲ. ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಗೂ ಕಾರಣವಾಗಬಹುದು. ಹೀಗಾಗಿ ದೇಹದ ಪರಿಸ್ಥಿತಿಗೆ ಅನುಗುಣವಾಗಿ ಬಾಳೆಹಣ್ಣು ಸೇವಿಸೋದು ಸರಿಯಾದ ವಿಧಾನ. ಇದು ದಿನನಿತ್ಯ ಆಹಾರದ ನಿಯಮಿತ ತಿಂಡಿಯಾಗದೇ ಇರಲಿ ಎನ್ನುತ್ತಾರೆ ತಜ್ಞರು.