ಸರಳ ಮದುವೆಗೆ ಮಾದರಿಯಾದ ಈ ಗ್ರಾಮ: ಆಭರಣ, ಆಹಾರ ಮತ್ತು ಡಿಜೆ ಮೇಲೆ ಕಠಿಣ ನಿರ್ಬಂಧ! Wedding

 Wedding
Wedding
Published on

ಪ್ರಮುಖ ಮುಖ್ಯಾಂಶಗಳು

  • ಮದುವೆ ಎನ್ನುವುದು ಒಂದು ಖಾಸಗಿ ಮತ್ತು ಸಂಪ್ರದಾಯಬದ್ಧ ಆಚರಣೆ
  • ದರೆ ಇತ್ತಿಚೀನ ದಿನಗಳಲ್ಲಿ ಮದುವೆ ಎನ್ನುವುದು ಒಂದು ಉದ್ಯಮವಾಗಿ ಬೆಳೆದಿದೆ
  • ಕೇವಲ ಆಂಡಬರಕ್ಕಾಗಿ ಮದುವೆ ಮಾಡುವ ಕೆಟ್ಟ ಗೀಳು ಪ್ರಾರಂಭವಾಗಿದೆ
ಡೆಹ್ರಾಡೂನ್‌: ಮದುವೆ (Wedding) ಎನ್ನುವುದು ಒಂದು ಖಾಸಗಿ ಮತ್ತು ಸಂಪ್ರದಾಯಬದ್ಧ ಆಚರಣೆ. ಆದರೆ ಇತ್ತಿಚೀನ ದಿನಗಳಲ್ಲಿ ಮದುವೆ ಎನ್ನುವುದು ಒಂದು ಉದ್ಯಮವಾಗಿ ಬೆಳೆದು ಪ್ರೀ ವೆಡ್ಡಿಂಗ್, ಪೋಸ್ಟ್​ ವೆಡ್ಡಿಂಗ್, ಡೆಸ್ಟಿನೇಶನ್​ ವೆಡ್ಡಿಂಗ್ ಹೀಗೆ ಏನೇನೋ ಅರ್ಥ, ಸಂಪ್ರದಾಯರಹಿತ ಕೇವಲ ಆಂಡಬರಕ್ಕಾಗಿ ಮದುವೆ ಮಾಡುವ ಕೆಟ್ಟ ಗೀಳು ನಡೆಯುತ್ತಿದೆ. ಮದುವೆ ಗಂಡು- ಹೆಣ್ಣಿನ ತಂದೆ-ತಾಯಿ ರಕ್ತ, ಬೆವರು ಸುರಿಸಿ ದುಡಿದ ಜೀವಮಾನ ಗಳಿಕೆಯನ್ನು 3 ದಿನದ ಮದುವೆ ಎಂಬ ಕಾರ್ಯಕ್ರಮಕ್ಕೆ ಖರ್ಚು ಮಾಡುವುದನ್ನು ಹುಚ್ಚಾಟವೆಂದೇ ಕರೆಯಬೇಕು.
ಅದಕ್ಕಾಗಿಯೇ ಈ ಅರ್ಥರಹಿತ ಮತ್ತು ಕೇವಲ ದೊಡ್ಡಸ್ತಿಕೆಯ ಪ್ರದರ್ಶನದ ಮದುವೆ ಆಚರಣೆಯನ್ನು ಡೆಹ್ರಾಡೂನ್‌ನ ಸಿಲ್ಗಾಂವ್ ಖಾಟ್ ಪ್ರದೇಶದ ಗ್ರಾಮಗಳು ನಿಯಂತ್ರಿಸಲು ಮುಂದಾಗಿವೆ. ಇದು ಹೆಚ್ಚುತ್ತಿರುವ ವೆಚ್ಚಗಳು, ಆಡಂಬರ ಮತ್ತು ಸಾಂಪ್ರದಾಯಿಕ ಆಚರಣೆಗಳಿಂದ ವಿಚಲನಗಳನ್ನು ತಡೆಯುವ ಗುರಿಯನ್ನು ಹೊಂದಿದೆ.
ಸದರ್ ಸ್ಯಾನ ತುಳಸಿ ರಾಮ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮದುವೆಯನ್ನು ಮನೆಯಲ್ಲಿಯೇ ಆಚರಿಸಬೇಕು ಯಾವುದೇ ಹಾಲ್​ಗಳಲ್ಲಿ ಮದುವೆ ಮಾಡುವಂತಿಲ್ಲ. ಈ ನಿಮಯವನ್ನು ಮುರಿದರೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ಒಂದು ಕುಟುಂಬವು ಮದುವೆಯ ಸ್ಥಳದಲ್ಲಿ ಮದುವೆ ನಡೆಸಿ ನಂತರ ಅವರ ಗ್ರಾಮದಲ್ಲಿ ಪಾರ್ಟಿಯನ್ನು ಆಯೋಜಿಸಿದರೆ, ಆ ಕುಟುಂಬದ ಸದಸ್ಯರು ಮಾತ್ರ ಹಾಜರಾಗಬೇಕು.ಬೇರೆ ಯಾವುದೇ ಗ್ರಾಮಸ್ಥರು ಭಾಗವಹಿಸುವಂತಿಲ್ಲ. ನಿಯಮವನ್ನು ಉಲ್ಲಂಘಿಸಿದರೆ, ಸಂಬಂಧಪಟ್ಟ ಕುಟುಂಬಕ್ಕೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಮತ್ತು ಗ್ರಾಮಸ್ಥರು ಕಾರ್ಯಕ್ರಮಕ್ಕೆ ಹಾಜರಾದರೆ, ಗ್ರಾಮದ ಮೇಲೆ ಹೆಚ್ಚುವರಿಯಾಗಿ 50,000 ರೂ. ದಂಡ ವಿಧಿಸಲಾಗುತ್ತದೆ ಎಂದು ನಿರ್ಧರಿಸಲಾಗಿದೆ.
ಮದುವೆಗಳು, ಬಿಸು ಜಾತ್ರೆ ಮತ್ತು ಸಾಮೂಹಿಕ ಖಾತ್ ಹಬ್ಬಗಳ ಸಮಯದಲ್ಲಿ ಮಹಿಳೆಯರ ಆಭರಣಗಳ ಮೇಲೂ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಮಹಿಳೆಯರು ಕಿವಿಯೋಲೆಗಳು, ಮೂಗುತಿಗಳು, ಮಂಗಳಸೂತ್ರ, ಕಾಲುಂಗುರಗಳು ಮತ್ತು ಉಂಗುರಗಳನ್ನು ಮಾತ್ರ ಧರಿಸಲು ಅನುಮತಿಸಲಾಗಿದೆ.

ಡಿಜೆ ನಿಷೇಧ, ಆಹಾರ ನಿಯಮಗಳು ಜಾರಿ

ಮದುವೆ ಸಮಾರಂಭಗಳಲ್ಲಿ ಡಿಜೆ ಸಂಗೀತವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಕೇವಲ ಸಾಂಪ್ರದಾಯಿಕ ಹಿಲ್ ಬ್ಯಾಂಡ್ ವಾದ್ಯಗಳನ್ನು ಮಾತ್ರ ಅನುಮತಿಸಲಾಗಿದೆ. ಮೊಮೊಸ್, ಚೌಮೈನ್, ಟಿಕ್ಕಿ, ಗೋಲ್ಗಪ್ಪ ಮತ್ತು ಹಣ್ಣುಗಳಂತಹ ಫಾಸ್ಟ್ ಫುಡ್ ಪದಾರ್ಥಗಳನ್ನು ನಿಷೇಧಿಸಲಾಗಿದ್ದು, ಊಟದ ನಂತರ, ರಸಗುಲ್ಲಾ ಅಥವಾ ಜಿಲೇಬಿಯನ್ನು ಮಾತ್ರ ನೀಡಬಹುದಾಗಿದೆ.
ಎಲ್ಲಾ ನಿಯಮಗಳನ್ನು ನಿವಾಸಿಗಳು ಸರ್ವಾನುಮತದಿಂದ ಒಪ್ಪಿಕೊಂಡಿದ್ದು, ಸರಳತೆ, ಸಮಾನತೆ ಮತ್ತು ಸಾಂಪ್ರದಾಯಿಕ ಸಾಮಾಜಿಕ ಮೌಲ್ಯಗಳ ಸಂರಕ್ಷಣೆಯನ್ನು ಉತ್ತೇಜಿಸಲು ಈ ನಿರ್ಧಾರಗಳು ಅಗತ್ಯವಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net