ಬೆಂಗಳೂರು: ಬೇಸಿಗೆ ರಜೆ ಎಂದರೆ ಪ್ರವಾಸ, ಮೋಜು-ಮಸ್ತಿ, ಹೊರಗಿನ ಜಂಕ್ ಫುಡ್, ತಂಪು ಪಾನೀಯಗಳು ಮತ್ತು ತಡರಾತ್ರಿಯವರೆಗೆ ಎಚ್ಚರವಿರುವುದು ಸಾಮಾನ್ಯ. ಆದರೆ, ಈ ಖುಷಿಯ ದಿನಗಳು ಕಳೆದು ಊರಿಗೆ ಮರಳುವಷ್ಟರಲ್ಲಿ ದೇಹ ಸಂಪೂರ್ಣವಾಗಿ ದಣಿದಿರುತ್ತದೆ. ಅದರಲ್ಲೂ ವಿಶೇಷವಾಗಿ ಉರಿಬಿಸಿಲಿನಲ್ಲಿ ಪ್ರಯಾಣ ಮಾಡಿದ ನಂತರ ಕರಳು ಮತ್ತು ಹೊಟ್ಟೆಯ ಆರೋಗ್ಯ ಏರುಪೇರಾಗಿ ಗ್ಯಾಸ್, ಅಸಿಡಿಟಿ,(Acidity) ಹೊಟ್ಟೆ ಉಬ್ಬರ ಹಾಗೂ ಮಲಬದ್ಧತೆಯಂತಹ ಸಮಸ್ಯೆಗಳು ಬಹುತೇಕರನ್ನು ಕಾಡತೊಡಗುತ್ತವೆ.