ಸುಡುವ ಬಿಸಿಲಿಗೆ ಹೊಟ್ಟೆ ತಂಪಾಗಿಸುವ ಕಾಯಿ ಅನ್ನ: ಬೇಸಿಗೆಗೆ ಇದಕ್ಕಿಂತ ಬೆಸ್ಟ್ ಊಟ ಮತ್ತೊಂದಿಲ್ಲ! Coconut Rice
ಸಾಂದರ್ಭಿಕ ಚಿತ್ರ
Published on:
Copied
Follow Us
Coconut Rice: ಶಿವರಾತ್ರಿ ಮುಗಿಯುತ್ತಿದ್ದಂತೆಯೇ ಬೇಸಿಗೆ ಪ್ರಾರಂಭವಾಗಿದೆ. ಜನರು ಬಿಸಿಲಿನ ಶಾಖವನ್ನು ತಡೆಯಲು ಆಗದೇ ಸುಸ್ತಾಗುತ್ತಿದ್ದಾರೆ. ಈ ಸಮಯದಲ್ಲಿ ಬಿಸಿ ಆಹಾರವನ್ನು ಸೇವಿಸಲು ಕಷ್ಟವಾಗಿರುವುದರಿಂದ ತಂಪಾದ ಆಹಾರಗಳಿಗೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ನೀವೇನಾದರೂ ಬೇಸಿಗೆಯ ದಗೆಗೆ ತಂಪಾದ ಆಹಾರವನ್ನು ಟ್ರೈ ಮಾಡ್ತಾ ಇದ್ದರೆ, ಈ ಕಾಯಿ ಅನ್ನ ರೆಸಿಪಿ ಮಾಡಿ. ಇದು ದೇಹಕ್ಕೂ ತಂಪು. ಆರೋಗ್ಯಕ್ಕೂ ಹಿತ.
ಬೇಕಾಗುವ ಸಾಮಾಗ್ರಿಗಳು
* 2 ಕಪ್ ಬೇಯಿಸಿದ ಅಕ್ಕಿ
* ¾ ರಿಂದ 1 ಕಪ್ ತುರಿದ ತೆಂಗಿನಕಾಯಿ
* ಉಪ್ಪು
* 2-3 ಟೇಬಲ್ ಸ್ಪೂನ್ ತುಪ್ಪ ಅಥವಾ ಎಣ್ಣೆ
* 1 ಟೀಸ್ಪೂನ್ ಸಾಸಿವೆ
* 1 ಟೀಸ್ಪೂನ್ ಉದ್ದಿನ ಬೇಳೆ
* 1 ಟೀಸ್ಪೂನ್ ಕಡಲೆ ಬೇಳೆ
* 10-12 ಕರಿಬೇವು ಎಲೆ
* 2-3 ಒಣಗಿದ ಕೆಂಪು ಮೆಣಸಿನಕಾಯಿ
* ¼ ಟೀಸ್ಪೂನ್ ಇಂಗು
* 10-15 ಗೋಡಂಬಿ
ಮಾಡುವ ವಿಧಾನ
ಮೊದಲು ಅಕ್ಕಿಯನ್ನು ಬೇಯಿಸಿಕೊಂಡು ತಣ್ಣಗಾಗಲು ಬಿಡಿ. ನಂತರ ಒಂದು ದೊಡ್ಡ ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಚಪಾಪಟ ಅಂತ ಸಿಡಿಸಿಕೊಳ್ಳಿ. ನಂತರ ಉದ್ದಿನ ಬೇಳೆ, ಕಡಲೆ ಬೇಳೆ, ಒಣಗಿದ ಮೆಣಸಿನಕಾಯಿ, ಕರಿಬೇವು, ಇಂಗು ಸೇರಿಸಿ ಸ್ವಲ್ವ ಬೇಯಿಸಿ ಅದಕ್ಕೆ ಗೋಡಂಬಿ ಸೇರಿಸಿ.
ಇದಾದ ಬಳಿಕ ಅದಕ್ಕೆ ತುರಿದ ತೆಂಗಿನಕಾಯಿ ಸೇರಿಸಿ 1-2 ನಿಮಿಷ ಹುರಿದು ಉಪ್ಪು ಸೇರಿಸಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಅನ್ನ ಸೇರಿಸಿಕೊಂಡು ಮಿಕ್ಸ್ ಮಾಡಿ 2-3 ನಿಮಿಷ ಬೇಯಿಸಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಸಿಂಪಡಿಸಿ. ಕಾಯಿ ಚಟ್ನಿಯೊಂದಿಗೆ ಸೇವಿಸಿರಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.