ಚಳಿಗಾಲದ ಸಂಜೆಗೆ ಬಿಸಿಬಿಸಿ ಕಾರ್ನ್ ಸೂಪ್: ಹೋಟೆಲ್ ರುಚಿ ಈಗ ನಿಮ್ಮ ಮನೆಯಲ್ಲೇ..Sweet Corn Soup

Sweet Corn Soup
Sweet Corn Soup
Published on
ಬೆಂಗಳೂರು : ಈ ಚಳಿಗಾಲದ ಸಂಜೆಗಳಿಗೆ ಬಿಸಿಬಿಸಿಯಾದ ಮತ್ತು ಕ್ರೀಮಿಯಾದ ಸ್ವೀಟ್ ಕಾರ್ನ್ ಸೂಪ್ (Sweet Corn Soup) ಅದ್ಭುತವಾಗಿರುತ್ತದೆ. ಹೋಟೆಲ್ ಶೈಲಿಯಲ್ಲೇ ಮನೆಯಲ್ಲಿ ತುಂಬಾ ಸರಳವಾಗಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಸ್ವೀಟ್ ಕಾರ್ನ್: 1 ಕಪ್ (ಬೇಯಿಸಿದ್ದು)
ಬೆಣ್ಣೆ /ಎಣ್ಣೆ: 1 ಚಮಚ
ಶುಂಠಿ, ಬೆಳ್ಳುಳ್ಳಿ: ಸಣ್ಣಗೆ ಹೆಚ್ಚಿದ್ದು 
ಕ್ಯಾರೆಟ್, ಬೀನ್ಸ್ -ಸಣ್ಣಗೆ ಹೆಚ್ಚಿದ್ದು 
ಕಾಳುಮೆಣಸಿನ ಪುಡಿ- ಅರ್ಧ ಚಮಚ
ಕಾರ್ನ್ ಫ್ಲೋರ್ - 1 ಚಮಚ (ನೀರಿನಲ್ಲಿ ಕಲಸಿದ್ದು)
ಉಪ್ಪು: ರುಚಿಗೆ ತಕ್ಕಷ್ಟು
ಸಕ್ಕರೆ: ಒಂದು ಚಿಟಿಕೆ
ನೀರು: 2 ರಿಂದ 3 ಕಪ್
ಕೊತ್ತಂಬರಿ ಸೊಪ್ಪು ಅಥವಾ ಸ್ಪ್ರಿಂಗ್ ಆನಿಯನ್: ಅಲಂಕಾರಕ್ಕೆ
ಮಾಡುವ ವಿಧಾನ:
1) ಮೊದಲು ಅರ್ಧ ಕಪ್ ಬೇಯಿಸಿದ ಸ್ವೀಟ್ ಕಾರ್ನ್ ಅನ್ನು ಮಿಕ್ಸಿಗೆ ಹಾಕಿ ಸ್ವಲ್ಪ ರುಬ್ಬಿಕೊಳ್ಳಿ. ಉಳಿದ ಅರ್ಧ ಕಪ್ ಕಾರ್ನ್ ಅನ್ನು ಹಾಗೆಯೇ ಇಟ್ಟುಕೊಳ್ಳಿ.
2) ಒಂದು ಪಾತ್ರೆಗೆ ಬೆಣ್ಣೆ ಹಾಕಿ ಬಿಸಿಯಾದ ನಂತರ, ಶುಂಠಿ ಮತ್ತು ಬೆಳ್ಳುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.ಈಗ ಕ್ಯಾರೆಟ್ ಮತ್ತು ಬೀನ್ಸ್ ಸೇರಿಸಿ 2 ನಿಮಿಷ ಬಾಡಿಸಿ. ನಂತರ ಉಳಿಸಿಕೊಂಡಿದ್ದ ಇಡೀ ಸ್ವೀಟ್ ಕಾರ್ನ್ ಕಾಳುಗಳನ್ನು ಹಾಕಿ ಮಿಕ್ಸ್ ಮಾಡಿ.
3) ಈಗ 2-3 ಕಪ್ ನೀರು ಮತ್ತು ನೀವು ಸಿದ್ಧಪಡಿಸಿಟ್ಟುಕೊಂಡ ಕಾರ್ನ್ ಪೇಸ್ಟ್ ಅನ್ನು ಪಾತ್ರೆಗೆ ಸುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ಚಿಟಿಕೆ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ.
4)ಸೂಪ್ ಕುದಿಯುತ್ತಿರುವಾಗ, ನೀರಿನಲ್ಲಿ ಕಲಸಿಟ್ಟ ಕಾರ್ನ್ ಫ್ಲೋರ್ ಮಿಶ್ರಣವನ್ನು ನಿಧಾನವಾಗಿ ಸುರಿಯಿರಿ. ಇದು ಸೂಪ್‌ಗೆ ಹೋಟೆಲ್ ಮಾದರಿಯ ಮಂದವಾದ ರೂಪ (Texture) ನೀಡುತ್ತದೆ.
5) ಸೂಪ್ ದಪ್ಪವಾದ ಮೇಲೆ ಕಾಳುಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ ಒಲೆಯಿಂದ ಕೆಳಗಿಳಿಸಿದರೆ ಈಗ ಬಿಸಿಬಿಸಿಯಾದ ಸೂಪ್​ ಸವಿಯಲು ಸಿದ್ಧವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net