Friendship Day 2026; ಅಂದು ಗ್ರೀಟಿಂಗ್ ಕಾರ್ಡ್ ವ್ಯಾಪಾರ, ಇಂದು ಭಾವನಾತ್ಮಕ ಬಂಧ; ಹೀಗಿದೆ ಸ್ನೇಹ ದಿನದ ರೋಚಕ ಹಿನ್ನೆಲೆ

 need to know about  Friendship Day 2026
need to know about Friendship Day 2026
Published on

need to know about Friendship Day 2026:

ಹೆಚ್ಚು ಸಮಸ್ಯೆ ಬಂದಾಗ ನೆನಪಾಗೋದು ಕುಟುಂಬಕ್ಕಿಂತ ಸ್ನೇಹಿತರು. ಪ್ರೀತಿಯಲ್ಲಿ ಬ್ರೇಕಪ್, ಯಾರಿಂದದಾದ್ರು ಸಮಸ್ಯೆ, ಹಣ, ಲವ್​ ಪ್ರಪೋಸಲ್, ಮದುವೆ ಪ್ರಪೋಸಲ್​ ಒಪ್ಪಿಕೊಳ್ಳೋದಾ ಬೇಡ್ವಾ? ಯಾವ ಕಂಪನಿಗೆ ಕೆಲಸಕ್ಕೆ ಹೋಗ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ಸ್ನೇಹಿತರು...ಅವರಿಗಾಗಿಯೇ ಇರುವ ಒಂದು ದಿನ ಎಂದರೆ ಅದೇ ಆಗಸ್ಟ್​ 2ರಂದು ಆಚರಿಸಲಾಗುವ ಸ್ನೇಹಿತರ ದಿನಾಚರಣೆ. ಈ ದಿನವನ್ನು ಬಳಕೆಗೆ ತಂದಿದ್ದು ಯಾರು, ಮಹತ್ವವೇನು ಎನ್ನುವ ಬಗ್ಗೆ ಇಂದು ಮಾಹಿತಿ ತಿಳಿದುಕೊಳ್ಳೋಣ.

ಆಗಸ್ಟ್​ 2 ಭಾನುವಾರ ಪ್ರಪಂಚದಲ್ಲಿ ಇರವ ಸ್ನೇಹಿತರಿಗೆಲ್ಲರಿಗೂ ಸಿಹಿ ಅಥವಾ ಯಾವುದೋ ವಸ್ತು ಕೊರಿಯರ್ ಮಾಡಿ ಸ್ನೇಹಿತರ ದಿನ ಆಚರಣೆ ಮಾಡಿಕೊಳ್ಳುತ್ತೇವೆ. ಇದು ಎಲ್ಲ ಹಬ್ಬಕ್ಕಿಂತ ಶ್ರೇಷ್ಠ. ಖುದ್ದಾಗಿ ನಾವೆ ಸ್ನೇಹಿತರಿಗೆ ವಸ್ತು ಖರೀದಿ ಮಾಡೋದು. ಉದ್ಯಾನದಲ್ಲಿ ತಿರುಗಾಡಿ ನೋವು ಹಂಚಿಕೊಳ್ಳೋದು ಸಾಮಾನ್ಯ. ಆದರೆ, ಈ ದಿನವನ್ನು ಎಲ್ಲ ದೇಶವು ಸ್ನೇಹಿತರ ದಿನವಾಗಿ ಆಚರಣೆ ಮಾಡಲು ಒಪ್ಪೋದಿಲ್ಲ,. ಕೆಲವರು ವಿಶ್ವಸಂಸ್ಥೆ ಪ್ರಕಟಿಸಿರುವ ಜುಲೈ 30ರ ಅಂತರರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುತ್ತಾರೆ. ಇದು ತನ್ನದೇ ಆದ ಇತಿಹಾಸವನ್ನು ಹೊಂದಿರುವ ಪ್ರತ್ಯೇಕ ಆಚರಣೆಯಾಗಿದೆ.

ಈ ಪರಿಕಲ್ಪನೆ ಬಂದಿದ್ದು ಹೇಗೆ?

ಸ್ನೇಹಕ್ಕಾಗಿಯೇ ಮೀಸಲಿರುವ ಆಚರಣೆ ಹಿಂದಿನ ಕತೆ ಒಂದು ಶತಮಾನದಷ್ಟು ಹಿಂದಿನದು. ಹಾಲ್‌ಮಾರ್ಕ್ ಅನ್ನು ಸ್ಥಾಪಿಸಿದ ಜಾಯ್ಸ್ ಹಾಲ್ 1930 ರ ದಶಕದಲ್ಲಿ ಈ ಕಲ್ಪನೆಯನ್ನು ಜಾರಿ ತಂದರು. ಆ ಮೂಲಕ ಸ್ನೇಹಿತರ ದಿನದ ಪರಿಕಲ್ಪನೆ ತಂದಿದ್ದು ಅವರೆ.
ಸ್ನೇಹಿತರು ಪರಸ್ಪರ ಶುಭಾಶಯ ಕಾರ್ಡ್‌ಗಳನ್ನು ಕಳುಹಿಸುವ ಮೂಲಕ ತಮ್ಮ ಬಾಂಧವ್ಯವನ್ನು ಆಚರಿಸಿಕೊಳ್ಳಲು ಈ ದಿನವನ್ನು ರೂಪಿಸಲಾಯಿತು. 1950ರ ದಶಕದಲ್ಲಿ ಪ್ಯಾರಾಗ್ಯುವಿನಲ್ಲಿ ದೊಡ್ಡ ಬದಲಾವಣೆ ಜಾರಿಗೆ ಬಂತು. 'ವಿಶ್ವ ಸ್ನೇಹಿ ಅಭಿಯಾನ' ಶುರುವಾಯಿತು. ಅವರ ಈ ಪರಿಕಲ್ಪನೆ ದೊಡ್ಡ ಗಾತ್ರದಲ್ಲಿ ಪ್ರಾಮಾಣಿಕ ಸ್ವರೂಪವನ್ನು ಪಡೆದುಕೊಂಡಿತು. ಗ್ರೀಟಿಂಗ್​ ಕಾರ್ಡ್​ ಮಾರಾಟವನ್ನು ಉತ್ತೇಜಿಸುವ ವಾಣಿಜ್ಯ ಚಿಂತನೆ ಇವರದ್ದಾಗಿತ್ತು.

ಸ್ನೇಹಿತರ ದಿನ vs ವಿಶ್ವ ಸ್ನೇಹಿತರ ದಿನಾಚರಣೆ

ಎರಡು ರೀತಿಯಲ್ಲಿ ಸ್ನೇಹಿತರ ದಿನ ಆಚರಿಸಲಾಗುತ್ತದೆ. ಒಂದು ವಿಶ್ವ ಸ್ನೇಹಿತರ ದಿನಾಚರಣೆ ಇನ್ನೊಂದು ಸ್ನೇಹಿತರ ದಿನಾಚರಣೆ 2011ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇದನ್ನು ಅಧಿಕೃತಗೊಳಿಸಿತು. ಜುಲೈ 30 ಅನ್ನು ಅಂತರರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇದನ್ನು ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರ ಆಚರಿಸಲಾಗುತ್ತದೆ.

ಸ್ನೇಹಿತರಿಗೆ ಏನು ಗಿಫ್ಟ್ ಕೊಡಬೇಕು?

ನಿಮ್ಮ ಬಳಿ ಹಣ ಇಲ್ಲ. ಗಿಫ್ಟ್ ಏನು ಕೊಡೋದು ಎಂದೆಲ್ಲ ಚಿಂತಿಸುತ್ತಾ ಕೂರುವ ಅಗತ್ಯವಿಲ್ಲ. ಒಂದು ಫೋನ್​ ಕರೆ ಮಾಡಿ ಗಂಟೆಗಟ್ಟಲೇ ಮಾತನಾಡಿ. ನೀವೆ ತಯಾರಿಸಿದ ಗ್ರೀಟಿಂಗ್​ ಕಾರ್ಡ್​ ಅಥವಾ ಯಾವುದಾದರೂ ವಸ್ತು ಕೊಡಿ. ನಿಮ್ಮ ಕೈಯಾರೆ ಅಡುಗೆ ತಯಾರಿಸಿ ಕೊಡಿ. ಯಾವುದಾದರೂ ಉದ್ಯಾನಕ್ಕೆ ಭೇಟಿ ನೀಡಿ ಅವರ ಕಷ್ಟವನ್ನು ಆಲಿಸಿ. ದೇವಸ್ಥಾನಕ್ಕೆ ಭೇಟಿ ನೀಡುವ ಪ್ಲ್ಯಾನ್​ ಮಾಡಿ. ಇದ್ಯಾವುದು ಸಾಧ್ಯವಾಗದೇ ಇದ್ದಾಗ. ಅವರಿಂದ ನಿಮಗಾದ ಸಹಾಯ. ನೀವು ಅವರಿಗಾಗಿ ಮಾಡಬೇಕಾದದ್ದು ಎಲ್ಲವನ್ನು ಉಲ್ಲೇಖಿಸಿ ಸುದೀರ್ಘವಾಗಿ ಬರೆದುಕೊಡಿ ಇದನ್ನು ಕಂಡಾದರು ಅವರು ಸಂತೃಪ್ತರಾಗಿ ದಿನ ಕಳೆಯುತ್ತಾರೆ.

ಸ್ನೇಹ ಸಂಬಂಧ ಕನ್ನಡದಲ್ಲಿರುವ ಹಾಡುಗಳಿವು, ವಾಟ್ಸಾಪ್​ ಸ್ಟೇಟಸ್ಗೆ ಬಳಸಬಹುದು​

  • ಕಾಲವನ್ನು ತಡೆಯೋರು ಯಾರು ಇಲ್ಲ(ಆಪ್ತಮಿತ್ರ)
  • ಸ್ನೇಹಿತರು ಇಲ್ದೋರು ವೇಸ್ಟು ಗುರು(ಸ್ನೇಹಿತರು)
  • ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ.. ಪ್ರೀತಿಯ ತೀರವ, ಸೇರುವುದೊಂದೇ ಬಾಳಿನ ಗುರಿಯಮ್ಮ(ಶುಭಮಂಗಳ)
  • ಗೆಳೆಯ ಗೆಳೆಯ - (ಚಕ್ರವ್ಯೂಹ)
  • ದೋಸ್ತ್​ ಕಣೋ(ರಾಬರ್ಡ್​)
  • ನಾನು ಸ್ನೇಹಜಿ ನೀನು ಸ್ನೇಹ ಜೀವಿ ಲೋಕದಲ್ಲಿ ಸ್ನೇಹ ಚಿರಂಜೀವಿ(ಸಿಪಾಯಿ)
  • ಕುಚಿಕು ಕುಚಿಕು (ದಿಗ್ಗಜರು), (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net