ಮೊದಲು ರಾಗಿ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿಕೊಳ್ಳಿ. ನಂತರ ಕುದಿಯುವಂತೆ ಬೇಯಿಸಿ ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಬಾಳೆಹಣ್ಣು, ನೆನೆಸಿದ ಬಾದಾಮಿ, ಖರ್ಜೂರ, ತಣ್ಣಗಾದ ರಾಗಿ ಮಿಶ್ರಣ, ಹಾಲು ಮತ್ತು ದಾಲ್ಚಿನ್ನಿ ಪುಡಿ ಹಾಕಿ ಸ್ಮೂತ್ ಆಗುವಂತೆ ರುಬ್ಬಿಕೊಳ್ಳಿ. ಅಗತ್ಯವಿದ್ದರೆ, ಸ್ವಲ್ಪ ಹಾಲು ಅಥವಾ ನೀರನ್ನು ಸೇರಿಸಿ.