ಐಪಿಎಲ್​​ ನಡೆದಿದ್ದ ವಿವಾದಗಳು: ಕ್ರಿಕೆಟ್ ಪ್ರೇಮಿಗಳು ಮರೆಯದ ಆ 5 'ಹಗರಣ'ಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!IPL Controversies

ಐಪಿಎಲ್​​ ನಡೆದಿದ್ದ ವಿವಾದಗಳು
ಐಪಿಎಲ್​​ ನಡೆದಿದ್ದ ವಿವಾದಗಳು
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ ಅಂದರೆ ಕೇವಲ ಕ್ರಿಕೆಟ್​ ಅಲ್ಲ
  • ಬಾಂಡರಿ ಸಿಕ್ಸ್​ರ್​ಗಳ ಜೊತೆ ಫಿಕ್ಸಿಂಗ್​ ಕೂಡ ನಡೆದಿದೆ
  • ಮೈದಾನದಲ್ಲೇ ಆಟಗಾರರು ಬಡಿದಾಡಿಕೊಂಡ ಘಟನೆ ಸಹ ಜರುಗಿದೆ
IPL Controversies: ಐಪಿಎಲ್​ ಇದು ಕೇವಲ ಒಂದು ಕ್ರಿಕೆಟ್​ ಟೂರ್ನಾಮೆಂಟಲ್ಲ, ಬದಲಾಗಿ ಭಾರತದಲ್ಲಿ ನಡೆಯುವ ಕ್ರಿಕೆಟ್​ ಹಬ್ಬ ಎಂದರೆ ಸುಳ್ಳಲ್ಲ. ಈ ಕ್ರಿಕೆಟ್​ ಹಬ್ಬದ 19 ನೇ ಸೀಸನ್​ ಇದೇ ಮಾರ್ಚ್​ 28 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿಯೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಈ ಐಪಿಎಲ್​ಗೆ ಕೇವಲ ಕ್ರಿಕೆಟ್​ ಹಬ್ಬವಾಗಿ, ಬಾಂಡರಿ ವಿಕೆಟ್​ಗಳ ಅಬ್ಬರದಿಂದ ಮಾತ್ರವಲ್ಲ, ಬದಲಿಗೆ ನಾನಾ ವಿವಾದಗಳಿಂದಾಗಿ ಸಹ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಇಂದು ನಾವು ಐಪಿಎಲ್​ನಲ್ಲಿ ನಡೆದ ಪ್ರಮುಖ ಐದು ಹಗರಣ ಅಥವಾ ವಿವಾದಗಳ ಬಗ್ಗೆ ತಿಳಿಯೋಣ.

1. ಮೈದಾನದಲ್ಲೇ ಬಿತ್ತು ಕೆನ್ನೆಗೆ ಪೆಟ್ಟು: ಹರ್ಭಜನ್-ಶ್ರೀಶಾಂತ್ ಸ್ಲ್ಯಾಪ್‌ಗೇಟ್!

ಈ ಘಟನೆ ನಡೆದಿದ್ದು ಚೊಚ್ಚಲ ಸೀಸನ್​ಲ್ಲಿ ಅಂದರೆ 2008 ರ ಐಪಿಎಲ್​ನಲ್ಲಿ. ಅಂದು ಮುಂಬೈ ಇಂಡಿಯನ್ಸ್​ ಹಾಗು ಕಿಂಗ್ಸ್​ ಇಲೆವನ್​ ಪಂಜಾಬ್​ ನಡುವಿನ ಪಂದ್ಯ ನಡೆದಿತ್ತು. ಪಂದ್ಯವೆಲ್ಲಾ ಮುಗಿದ ಮೇಲೆ ಹರ್ಭಜನ್ ಸಿಂಗ್, ಬೌಲರ್​ ಶ್ರೀಶಾಂತ್ ಅವರ ಕೆನ್ನೆಗೆ ಮೈದಾನದಲ್ಲಿಯೇ ಬಾರಿಸಿದ್ದನ್ನು ನೋಡಿ ಜನ ದಿಗಿಲುಗೊಂಡಿದ್ದರು. ಈ ಘಟನೆ ಈಗ 40 ರ ಆಸುಪಾಸಿನಲ್ಲಿರುವ ಜನರಿಗೆ ಸರಿಯಾಗಿ ನೆನಪಿದೆ. ಈಗೀನ ಕಾಲದ ಮಕ್ಕಳು ಈ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. ಈ ಘಟನೆಗೆ ಸ್ಲ್ಯಾಪ್‌ಗೇಟ್ ಹಗರಣ ಎಂದೇ ಕೆರೆಯಲಾಗುತ್ತದೆ.

2. ಫಿಕ್ಸಿಂಗ್ ಭೂತ; ಆಟಗಾರರ ನಿಷೇಧ

2013ರ ಐಪಿಎಲ್ ಕೇವಲ ಕ್ರಿಕೆಟ್‌ಗೆ ಸೀಮಿತವಾಗಲಿಲ್ಲ. ಕ್ರಿಕೆಟ್​ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತು. ಈ ಹಗರಣ ಐಪಿಎಲ್​ ಮೇಲಿನ ವಿಶ್ವಾಸಾರ್ಹತೆಯನ್ನೇ ಬುಡಮೇಲು ಮಾಡಿದ್ದು ಸುಳ್ಳಲ್ಲ. ಈ ಸ್ಪಾಟ್ ಫಿಕ್ಸಿಂಗ್‌ ಆರೋಪದಲ್ಲಿ ಶ್ರೀಶಾಂತ್, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚವಾಣ್ ಮೇಲೆ ಕ್ರಿಕೆಟ್​ನಿಂದ ನಿಷೇಧ ಹೇರಲಾಯಿತು.

3. ಸಿಎಸ್‌ಕೆ ಮತ್ತು ರಾಜಸ್ಥಾನ ರಾಯಲ್ಸ್ ಬ್ಯಾನ್​

ಈ ಸ್ಪಾಟ್ ಫಿಕ್ಸಿಂಗ್‌ ಮತ್ತು ಮ್ಯಾಚ್​ ಫಿಕ್ಸಿಂಗ್​ ಆರೋಪಗಳು ಕೇವಲ ಆಟಗಾರರಿಗೆ ಸೀಮಿತವಾಗಿರದೇ, ತಂಡಕ್ಕೆ ತಂಡವನ್ನೇ ಬ್ಯಾನ್​ ಮಾಡುವ ಪ್ರಸಂಗವೂ ಐಪಿಎಲ್​ನಲ್ಲಿ ನಡೆದಿದೆ ಎಂದರೆ ನೀವು ನಂಬಲೇ ಬೇಕು. ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ತಂಡಗಳನ್ನು 2016 ಮತ್ತು 2017 ರ ಎರಡು ಆವೃತ್ತಿಗಳಿಂದ ಬ್ಯಾನ್​ ಮಾಡಲಾಗಿತ್ತು. ಈ ತಂಡಗಳ ಜಾಗವನ್ನು ಪುಣೆ ಸೂಪರ್​ ಜೈಂಟ್ಸ್​ ಹಾಗು ಗುಜರಾತ್ ಲಯನ್ಸ್​ ತಂಡಗಳು ತುಂಬಿದ್ದವು.

4. ಜಡೇಜಾ ಮೇಲೂ ಬಿದ್ದಿತ್ತು ನಿಷೇಧದ ಬಿಸಿ!

ಇಂದು ವಿಶ್ವದ ನಂಬರ್ 1 ಆಲ್‌ರೌಂಡರ್ ಆಗಿರುವ ರವೀಂದ್ರ ಜಡೇಜಾ ಕೂಡ ಒಮ್ಮೆ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿದ್ದರು ಎಂದರೆ ನೀವು ನಂಬಲೇಬೇಕು. 2010ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಜಡೇಜಾ, ನಿಯಮ ಮೀರಿ ಬೇರೆ ತಂಡದ ಜೊತೆ ಒಪ್ಪಂದಕ್ಕೆ ಮಾತುಕತೆ ನಡೆಸಿದ್ದರು. ಈ ಕಾರಣಕ್ಕೆ ಬಿಸಿಸಿಐ ಅವರನ್ನು ಒಂದು ವರ್ಷ ಐಪಿಎಲ್​ ನಿಂದ ಅಮಾನತು ಮಾಡಿತ್ತು.

5. ವಾಂಖೇಡೆಯಲ್ಲಿ ಶಾರುಖ್ ಖಾನ್ ಕಿರಿಕ್

ಇದು ಮೈದಾನದ ಒಳಗಿನ ವಿವಾದವಲ್ಲದಿದ್ದರೂ ಕೆಕೆಆರ್ ಮಾಲೀಕ ಶಾರುಖ್ ಖಾನ್ ಅವರಿಗೆ ದೊಡ್ಡ ಹೊಡೆತ ನೀಡಿತ್ತು. 2012ರಲ್ಲಿ ವಾಂಖೇಡೆ ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಕ್ಕಾಗಿ ಶಾರುಖ್ ಅವರಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ 5 ವರ್ಷಗಳ ಕಾಲ ಮೈದಾನಕ್ಕೆ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು.
ಆದರೆ ಇಷ್ಟೆಲ್ಲಾ ವಿವಾದಗಳೂ ಸಂಭವಿಸಿದರೂ ಐಪಿಎಲ್​ ಕ್ರೇಜ್​ ಹೆಚ್ಚುತ್ತಾ ಹೋಯಿತೇ ಹೊರತು ಎಂದಿಗೂ ಕಡಿಮೆ ಆಗಲೇ ಇಲ್ಲ. ಈಗ ಮಾರ್ಚ್​ 28, 2026 ರಿಂದ 19 ನೇ ಆವೃತ್ತಿಯ ಐಪಿಎಲ್​ನ್ನು ಜನ ಅಷ್ಟೇ ಸಡಗರದಿಂದ ಸ್ವಾಗತಿಸಲು ಕ್ರಿಕೆಟ್​ ಅಭಿಮಾನಿಗಳು ಸಜ್ಜಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net