ಸಿಕ್ಸರ್​ಗಳ ಸುರಿಮಳೆಗೈದ ವೆಂಕಿ, 'ಕಿಂಗ್'​ ಅರ್ಧಶತಕ! ಪಂಜಾಬ್​ ಕಿಂಗ್ಸ್​ಗೆ 223 ರನ್​ಗಳ ಬೃಹತ್ ಗುರಿ

RCB vs PBKS ಪಂದ್ಯ
RCB vs PBKS ಪಂದ್ಯ
Published on
RCB vs PBKS: ಇಂದು (ಮೇ.17) ಧರ್ಮಶಾಲಾದಲ್ಲಿ ನಡೆಯುತ್ತಿರುವ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್​ 19ನೇ ಆವೃತ್ತಿಯ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಪಂಜಾಬ್​, ರಜತ್ ಪಾಟೀದಾರ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಹೇಳಿತು. ಅಂತೆಯೇ, 20 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ ಆರ್​ಸಿಬಿ 222 ರನ್​ಗಳನ್ನು ಕಲೆಹಾಕಿತು. ತಂಡದ ಪರ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ದೇವದತ್ತ ಪಡಿಕ್ಕಲ್ (45 ರನ್​) ಮತ್ತು ವಿರಾಟ್​ ಕೊಹ್ಲಿ (55 ರನ್​) ಸಿಕ್ಸರ್​ ಮತ್ತು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಪವರ್​ಪ್ಲೇನಲ್ಲಿ ಹೆಚ್ಚುವರಿ ರನ್​ಗಳನ್ನು ಕಲೆಹಾಕಿದರು.
ಇನ್ನು ಪಡಿಕ್ಕಲ್​ ವಿಕೆಟ್​ ಬೆನ್ನಲ್ಲೇ ರಜತ್ ಪಾಟೀದಾರ್​ ಅಲಭ್ಯತೆ ಕಾರಣ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​, ಪಂಜಾಬ್ ಬೌಲರ್​ಗಳನ್ನು ಚೆಂಡಾಡಿದರು. ಕೇವಲ ಸಿಕ್ಸರ್​ಗಳಲ್ಲೇ ಡೀಲ್​ ಮಾಡಿದ ವೆಂಕಿ, 40 ಎಸೆತಗಳಲ್ಲಿ 73 ರನ್​ ಸಿಡಿಸಿದರು. ಇದರಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್​ಗಳನ್ನು ಬಾರಿಸಿದರು. ಆರ್​ಸಿಬಿ ನೀಡಿದ 223 ರನ್​ಗಳ ಗುರಿಯನ್ನು ಪಂಜಾಬ್​ ಬ್ಯಾಟರ್​ಗಳು ಸುಲಭವಾಗಿ ಚೇಸ್​ ಮಾಡಲಿದ್ದಾರಾ ಅಥವಾ ವಿಕೆಟ್​ ಕಳೆದುಕೊಂಡು ಪಂದ್ಯ ಬಿಟ್ಟುಕೊಡಲಿದ್ದಾರಾ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net