ಸಿಕ್ಸರ್​, ಬೌಂಡರಿಗಳ 'ವೈಭವ'! ರಾಜಸ್ಥಾನ ರಾಯಲ್ಸ್ 'ಯಶಸ್ವಿ' ಪ್ರದರ್ಶನಕ್ಕೆ ತಲೆಬಾಗಿದ ಚೆನ್ನೈ ಸೂಪರ್ ಕಿಂಗ್ಸ್​ | CSK vs RR

CSK vs RR ನಡುವಿನ ಐಪಿಎಲ್​ ಪಂದ್ಯ
CSK vs RR ನಡುವಿನ ಐಪಿಎಲ್​ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಗುವಾಹಟಿಯಲ್ಲಿ ಸಿಎಸ್​ಕೆ ಮತ್ತು ಆರ್​ಆರ್​ ನಡುವೆ ಮೂರನೇ ಐಪಿಎಲ್ ಪಂದ್ಯ
  • ಸಿಎಸ್​ಕೆ ನೀಡಿದ 128 ರನ್​ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಆರ್​ಆರ್​
  • ವೈಭವ್ ಸೂರ್ಯವಂಶಿ ಆರ್ಭಟಕ್ಕೆ ತತ್ತರಿಸಿದ ಚೆನ್ನೈ ಪಡೆ
CSK vs RR: ಇಂದು (ಮಾ.30) ಅಸ್ಸಾಂನ ಗುವಾಹಟಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 19ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಓನ್​ ಸೈಡೆಡ್​ ಆದ ಪಂದ್ಯದಲ್ಲಿ ರಾಜಸ್ಥಾನ ಪರ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಬಾರಿಸಿದರು.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್​ಆರ್​, ರುತುರಾಜ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್​ ಮಾಡಿದ ಸಿಎಸ್​ಕೆಗೆ ಯಾವೊಬ್ಬ ಬ್ಯಾಟರ್​ ಕೂಡ ಉತ್ತಮ ಸಾಥ್​ ನೀಡಲಿಲ್ಲ. 19.4 ಓವರ್​ಗೆ ಆಲ್​ಔಟ್​ ಆದ ಸಿಎಸ್​ಕೆ, ಕೇವಲ 127 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಬೆನ್ನತ್ತಿದ ಆರ್​ಆರ್​ ಪಡೆಗೆ ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್​ರಿಂದ ಉತ್ತಮ ಜತೆಯಾಟ ಸಿಕ್ಕಿತು.

3ನೇ ಅತಿ ವೇಗದ ಅರ್ಶಶತಕ

17 ಎಸೆತಕ್ಕೆ 52 ರನ್​ ದಾಖಲಿಸಿದ ಸೂರ್ಯವಂಶಿ, 4 ಬೌಂಡರಿ ಮತ್ತು ಐದು ಸಿಕ್ಸರ್​ಗಳನ್ನು ಬಾರಿಸಿದರು. 305.88 ಸ್ಟ್ರೈಕ್​ರೇಟ್​ನಲ್ಲಿ ಆಡಿದ ವೈಭವ್​, ಸಿಎಸ್​ಕೆ ಬೌಲರ್​ಗಳ ಬೆವರಿಳಿಸಿದ್ದು ನೋಡುಗರಿಗೆ ಮನರಂಜನೆಯ ರಸದೌತಣ ನೀಡಿತು. ಈ ಮೂಲಕ ವೈಭವ್​, ಐಪಿಎಲ್​ ಇತಿಹಾಸದಲ್ಲಿ ಮೂರನೇ ಅತಿವೇಗದ ಅರ್ಧಶತಕ ದಾಖಲಿಸಿದರು. ಅವರ ಬಳಿಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದ ಯಶಸ್ವಿ, 37 ರನ್​ ಬಾರಿಸುವ ಮೂಲಕ ಅಜೇಯರಾಗಿ ಉಳಿದರು.

ಬೌಲಿಂಗ್​ನಲ್ಲೂ ಮಿಂಚಿದ ಆರ್​ಆರ್​

ಕೇವಲ ಒಂದೇ ಓವರ್​ನಲ್ಲಿ ಇಬ್ಬರ ವಿಕೆಟ್​ ಪಡೆದ ಜಡೇಜಾ, ಮೊದಲ ಇನ್ನಿಂಗ್ಸ್​ನಲ್ಲೇ ಗುಲಾಬಿ ಬಣ್ಣದ ಜೆರ್ಸಿಯಲ್ಲಿ ಸಿಎಸ್​ಕೆಗೆ ಪರೋಕ್ಷ ಎಚ್ಚರಿಕೆ ನೀಡಿದರು. ಜೋಫ್ರಾ ಆರ್ಚರ್​, ನಂದ್ರೆ ಬರ್ಗರ್​ ತಲಾ ಎರಡು, ಬ್ರಿಜೇಶ್ ಶರ್ಮ ಮತ್ತು ಸಂದೀಪ್ ಶರ್ಮ, ರವಿ ಬಿಷ್ಣೋಯಿ ತಲಾ ಒಂದು ವಿಕೆಟ್​ಗಳನ್ನು ಪಡೆಯುವ ಮೂಲಕ ತಂಡದ ಪರ ಮಿಂಚಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net