ಸಮಯ ಬಂದರೆ ಗ್ರೀನ್ಲ್ಯಾಂಡ್ನ್ನು ವಶಕ್ಕೆ ಪಡೆಯುವುದಾಗಿ, ಟ್ರಂಪ್ ಹೇಳಿಕೆಗೆ ಯುರೋಪಿಯನ್ ರಾಷ್ಟ್ರಗಳ ನಾಯಕರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಯುಕೆ, ಫ್ರಾನ್ಸ್, ಜರ್ಮನಿ, ಇಟಲಿ, ಪೋಲೆಂಡ್, ಸ್ಪೇನ್ ಮತ್ತು ಡೆನ್ಮಾರ್ಕ್ ನಾಯಕರು ಜಂಟಿ ಸಂದೇಶದಲ್ಲಿ, ಗ್ರೀನ್‌ಲ್ಯಾಂಡ್ ಅಲ್ಲಿಯ ಜನರಿಗೆ ಸೇರಿದ್ದಾಗಿದ್ದು, ಅಲ್ಲಿಯ ನಿರ್ಧಾರಗಳನ್ನು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಮಾತ್ರ ತೆಗೆದುಕೊಳ್ಳಲು ಅರ್ಹರು ಎಂದು ಹೇಳಿವೆ. ವಿಶ್ವ ಸಂಸ್ಥೆಯ ಚಾರ್ಟರ್ ಮತ್ತು ನಿಯಮಗಳಿಗೆ ಜಗತ್ತಿನ ಎಲ್ಲಾ ದೇಶಗಳು ಗೌರವ ನೀಡಬೇಕು ಎಂದು ಹೇಳಿದವು