ಪ್ರಸ್ತುತ, ಶತಕೋಟಿ ಬಳಕೆದಾರರನ್ನು ಹೊಂದಿರುವ ಯೂಟ್ಯೂಬ್, ಮನರಂಜನೆ, ಶಿಕ್ಷಣ, ಟೆಕ್ನಾಲಜಿ, ಉತ್ತಮ ಮಾಹಿತಿಯಿಂದ ಹಿಡಿದು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಜನರಿಗೆ ವಿಡಿಯೋ ಮೂಲಕ ತಲುಪಿಸುತ್ತದೆ. ಆದಾಗ್ಯೂ, ಬಹುತೇಕ ಮಂದಿ ಯೂಟ್ಯೂಬ್ ಅನ್ನು ಮನರಂಜನೆಗಾಗಿಯೇ ಹೆಚ್ಚು ಬಳಸುತ್ತಾರೆ. ಈ ಪ್ಲಾಟ್ಫಾರ್ಮ್ಗಳ ಸದುಪಯೋಗವನ್ನು ಪಡೆದುಕೊಳ್ಳುವ ಅದೆಷ್ಟೋ ವಿಡಿಯೋ ಕ್ರಿಯೇಟರ್ಸ್ಗಳು, ಹೆಚ್ಚೆಚ್ಚು ಕ್ರಿಯೇಟಿವ್ ಕಂಟೆಂಟ್ಗಳನ್ನು ಮಾಡಿ, ತಮ್ಮ ಖಾತೆಗಳ ಮೂಲಕ ಹರಿಬಿಡುತ್ತಾರೆ.