ಇರಾನ್ ಜೊತೆಗಿನ ಕದನ ವಿರಾಮ ಮುಗಿದಿದೆ; ಹೊಸ ಮಾತುಕತೆ ಮುಂದುವರೆದಿದೆ: ಡೊನಾಲ್ಡ್ ಟ್ರಂಪ್ | Donald Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಅಂತ್ಯಗೊಂಡಿದೆ ಎಂದು ಶುಕ್ರವಾರ(ಜು.10) ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಅದಾಗ್ಯೂ ಉಭಯ ದೇಶಗಳ ನಡುವೆ ಹೊಸ ಶಾಂತಿ ಮಾತುಕತೆಗೆ ಅಮೆರಿಕ ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ತಮ್ಮ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಇರಾನ್ ನಮ್ಮನ್ನು ಮತ್ತೆ ಮಾತುಕತೆ ಮುಂದುವರಿಸಲು ಕೇಳಿಕೊಂಡಿದೆ. ನಾವು ಸಹ ಒಪ್ಪಿಕೊಂಡಿದ್ದೇವೆ, ಆದರೆ ಅಮೆರಿಕವು ಅವರಿಗೆ ಖಚಿತವಾಗಿ ಹೇಳುವಂತ ಕದನ ವಿರಾಮ ಮುಗಿದಿದೆ! ಎಂದು ಬರೆದುಕೊಂಡಿದ್ದಾರೆ.
ಈ ವಾರದ ಆರಂಭದಲ್ಲಿ ಅಂಕಾರಾದಲ್ಲಿ ಮಾತನಾಡಿದ್ದ ಟ್ರಂಪ್, ಏಪ್ರಿಲ್ 8ರಂದು ಜಾರಿಗೆ ಬಂದ ಕದನ ವಿರಾಮವು ಸಂಪೂರ್ಣ ಯುದ್ಧವನ್ನು ಕೊನೆಗೊಳಿಸಿತು. ಆದರೆ ಇರಾನಿನ ಕಲ್ಮಷ ಮತ್ತು ಅಸ್ವಸ್ಥ ಅಧಿಕಾರಿಗಳ ಪುನರಾವರ್ತಿತ ಸಂಘರ್ಷದಿಂದ ಆ ಒಪ್ಪಂದ ಹಾನಿಗೊಳಗಾಗಿದೆ ಎಂದು ಹೇಳಿದ್ದರು.
ಕಳೆದ ನಾಲ್ಕೈದು ದಿನಗಳಲ್ಲಿ ಎರಡೂ ಕಡೆಯವರು ಹಲವಾರು ಬಾರಿ ದಾಳಿ, ಪ್ರತಿದಾಳಿ ನಡೆಸಿದ್ದಾರೆ. ಇರಾನ್ ಮೂರು ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗೆ ಪ್ರತಿಯಾಗಿ, ಇರಾನ್ ಪ್ರದೇಶಗಳ ಮೇಲೆ ಅಮೆರಿಕ ಪ್ರತಿಯಾಗಿ ದಾಳಿ ನಡೆಸಿತ್ತು. ಅದಕ್ಕೆ ಮತ್ತೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯ ದೇಶಗಳಲ್ಲಿನ ಅಮೆರಿಕದ ಆಸ್ತಿಗಳ ಮೇಲೆ ದಾಳಿ ನಡೆಸಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net