ಇಸ್ರೇಲ್ ಪ್ರಸ್ತುತ ದುಷ್ಟತೆಯ ಅಕ್ಷದ ವಿರುದ್ಧ ಅಂತಹದೇ ಹೋರಾಟ ನಡೆಸುತ್ತಿದ್ದು, ಗಾಜಾದಲ್ಲಿ ಹಮಾಸ್, ಲೆಬನಾನ್‌ನಲ್ಲಿ ಹಿಜ್ಬೊಲ್ಲಾ, ಸಿರಿಯಾದಲ್ಲಿ ಅಸ್ಸಾದ್ ಸರ್ಕಾರ, ಯೆಮೆನ್‌ನಲ್ಲಿ ಹೌತಿಗಳು ಮತ್ತು ಜುಡಿಯಾ-ಸಮರಿಯಾದಲ್ಲಿನ ಉಗ್ರಗಾಮಿಗಳ ವಿರುದ್ಧದ ದಾಳಿಗಳನ್ನು ಅವರು ಈ ಸಂದರ್ಭದಲ್ಲಿ ಪಟ್ಟಿ ಮಾಡಿದ್ದಾರೆ. ಇರಾನ್ ವಿರುದ್ಧದ ಕ್ರಮಗಳಲ್ಲಿ ಪ್ರಮುಖವಾಗಿ ಅವರ ಪರಮಾಣು ಕಾರ್ಯಕ್ರಮ, ಕ್ಷಿಪಣಿ ಕೇಂದ್ರಗಳು, ಆಡಳಿತದ ಮೂಲಸೌಕರ್ಯ ಮತ್ತು ಇರಾನಿನ ಹಿರಿಯ ನಾಯಕತ್ವಕ್ಕೆ ನೀಡಿರುವ ಭಾರಿ ಹೊಡೆತಗಳನ್ನು ನೆತನ್ಯಾಹು ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ(ಏಜೆನ್ಸೀಸ್).