ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವು; ಬೆಚ್ಚಿಬೀಳಿಸುವಂತಿದೆ ವಿಡಿಯೋ..! | Footballer killed by lightning

ಆಟದ ವೇಳೆ ಸಿಡಿಲು ಬಡಿದು ಥಾಯ್ ಫುಟ್ಬಾಲ್ ಆಟಗಾರ ಸಾವು
ಆಟದ ವೇಳೆ ಸಿಡಿಲು ಬಡಿದು ಥಾಯ್ ಫುಟ್ಬಾಲ್ ಆಟಗಾರ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಫುಟ್ಬಾಲ್ ಪಂದ್ಯದ ವೇಳೆ ನಡೆದ ದುರಂತ, ಸಿಡಿಲಿಗೆ 24 ವರ್ಷದ ಆಟಗಾರ ಬಲಿ
  • ಥೈಲ್ಯಾಂಡ್‌ನಲ್ಲಿ ಭಾರೀ ಮಳೆಯ ನಡುವೆ ನಡೆದ ಫುಟ್ಬಾಲ್ ಮ್ಯಾಚ್​
  • ದುರಂತದಲ್ಲಿ ಮಲೇಷ್ಯಾದ ಆಟಗಾರ ಸೇರಿದಂತೆ 12 ಮಂದಿಗೆ ಗಾಯ
ಥೈಲ್ಯಾಂಡ್: ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ಸಿಡಿಲು ಬಡಿದು 24 ವರ್ಷದ ಆಟಗಾರ ಮೃತಪಟ್ಟ ದುರ್ಘಟನೆ ಥೈಲ್ಯಾಂಡ್‌ನಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಕ್ಷಿಣ ನರಥಿವತ್ ಪ್ರಾಂತ್ಯದ ಸುಂಗೈ ಗೋಲೋಕ್​ನ ಸ್ಯಾಂಟಿಫಾಪ್ ಕ್ರೀಡಾಂಗಣದಲ್ಲಿ ಗೋಲೋಕ್ ಎಫ್‌ಎ ಕಪ್ ಸೆಮಿಫೈನಲ್ ಮ್ಯಾಚ್​ ನಡೆಯುತ್ತಿತ್ತು. ಭಾರೀ ಮಳೆಯ ನಡುವೆಯೇ ಅಬ್ಬರದ ಆಟ ಸಾಗಿತ್ತು. ಆಟಗಾರರ(Footballer) ಬಿರುಸಿನಿಂದ ಆಡುವುದರಲ್ಲಿ ಮಗ್ನರಾಗಿದ್ರು. ಈ ವೇಳೆ ಏಕಾಏಕಿ ರಕ್ಕಸ ಸಿಡಿಲೊಂದು ಅಪ್ಪಳಿಸಿದೆ.

ಚಿಕಿತ್ಸೆ ಫಲಿಸದೆ ಸೋಫ್ವಾನ್ ಸಾವು; 12 ಮಂದಿಗೆ ಗಾಯ

ಈ ಸಿಡಿಲು ಬಡಿದ ಪರಿಣಾಮ ಯಾಲಾ ಎಫ್‌ಸಿ ತಂಡದ ಆಟಗಾರ ಸೋಫ್ವಾನ್ ಅವೇ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಜೀವ ಬಿಟ್ಟಿದ್ದಾರೆ. ಅಲ್ಲದೆ ಈ ದುರಂತದಲ್ಲಿ ಮಲೇಷ್ಯಾದ ಆಟಗಾರ ಸೇರಿದಂತೆ ಸುಮಾರು 12 ಮಂದಿ ಗಾಯಗೊಂಡಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಟಗಾರನ ಅಕಾಲಿಕ ಸಾವಿಗೆ ಅಭಿಮಾನಿಗಳ ಕಂಬನಿ

ಇನ್ನು ಘಟನೆಯ ಬಳಿಕ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ರು. ಮೃತ ಸೋಫ್ವಾನ್ ಇತ್ತೀಚೆಗಷ್ಟೇ ಯಾಲಾ ಎಫ್‌ಸಿ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ. ಸೋಫ್ವಾನ್ ಸಾವಿಗೆ ಯಾಲಾ ಎಫ್‌ಸಿ ಹಾಗೂ ಥೈಲ್ಯಾಂಡ್ ಫುಟ್ಬಾಲ್ ಅಸೋಸಿಯೇಷನ್ ಸಂತಾಪ ಸೂಚಿಸಿವೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net