ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ; ಇಬ್ಬರು ವಿದ್ಯಾರ್ಥಿಗಳು ಬಲಿ: 8 ಜನರಿಗೆ ಗಾಯ!

Brown University
Brown University
Published on
ಅಮೆರಿಕ: ಬ್ರೌನ್ ವಿಶ್ವವಿದ್ಯಾಲಯದಲ್ಲಿ (ಪ್ರಾವಿಡೆನ್ಸ್, ರೋಡ್ ಐಲ್ಯಾಂಡ್) ಭಾನುವಾರ ಮುಂಜಾನೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ 2 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು 8-9 ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ದಾಳಿ ಬಾರಸ್ ಅಂಡ್ ಹಾಲಿ ಎಂಜಿನಿಯರಿಂಗ್ ಕಟ್ಟಡದಲ್ಲಿ ನಡೆದಿದ್ದು, ವಿದ್ಯಾರ್ಥಿಗಳಿಗೆ ಫೈನಲ್ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಘಟನೆ ಸಂಭವಿಸಿದೆ.
ಆರೋಪಿ ಇನ್ನೂ ಬಂಧನಕ್ಕೊಳಗಾಗಿಲ್ಲ. ಪೊಲೀಸರು ಮತ್ತು FBI ಮ್ಯಾನ್‌ಹಂಟ್ ನಡೆಸುತ್ತಿದ್ದಾರೆ.ಕ್ಯಾಂಪಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶೆಲ್ಟರ್-ಇನ್-ಪ್ಲೇಸ್ ಆದೇಶ ಜಾರಿಯಲ್ಲಿದೆ. ಇನ್ನು ಆರೋಪಿ ಕಪ್ಪು ಬಟ್ಟೆ ಧರಿಸಿದ್ದಾನೆ ಸುಮಾರು 30 ವಯಸ್ಸಿನವ ಎಂದು ಅಂದಾಜಿಸಲಾಗಿದೆ. ವಿಶ್ವವಿದ್ಯಾನಿಲಯದ ತುರ್ತು ಅಧಿಸೂಚನೆ ವ್ಯವಸ್ಥೆಯ ಪ್ರಕಾರ ಪೊಲೀಸರು ಇನ್ನೂ ಶಂಕಿತ ವ್ಯಕ್ತಿ ಅಥವಾ ಶಂಕಿತರಿಗಾಗಿ ಹುಡುಕುತ್ತಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಘಟನೆಯ ಬಗ್ಗೆ Truth Social ನಲ್ಲಿ ಪೋಸ್ಟ್ ಮಾಡಿ, "FBI ಸ್ಥಳಕ್ಕೆ ಧಾವಿಸಿದೆ" ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು (ಪೊಲೀಸ್ ಅಥವಾ ವಿಶ್ವವಿದ್ಯಾಲಯದ ಅಪ್‌ಡೇಟ್‌ಗಳು) ಅವಲಂಬಿಸಿ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಹೇಳಿರುವ ಅವರು, ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಸಂತಾಪ ಸೂಚಿಸಿದ್ದಾರೆ.
ಬ್ರೌನ್ ವಿಶ್ವವಿದ್ಯಾಲಯವು ಸುಮಾರು 7,300 ಪದವಿಪೂರ್ವ ವಿದ್ಯಾರ್ಥಿಗಳು ಮತ್ತು 3,000 ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳನ್ನು ಹೊಂದಿರುವ ಖಾಸಗಿ ಸಂಸ್ಥೆಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net