ಜಕಾರ್ತದಲ್ಲಿ ಏಳು ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ; 20 ಮಂದಿ ಸಜೀವ ದಹನ | Massive fire

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಜಕಾರ್ತ: ಇಂಡೋನೇಷ್ಯಾದ ಸೆಂಟ್ರಲ್ ಜಕಾರ್ತದಲ್ಲಿ ಏಳು ಅಂತಸ್ತಿನ ಕಚೇರಿಗಳ ಕಟ್ಟಡದಲ್ಲಿ ಇಂದು(ಡಿ. 09) ಭೀಕರ ಅಗ್ನಿ ಅವಘಡ(Massive fire) ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿಯಾಗಿದೆ.
ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಘಟನೆ ನಡೆದಿದೆ. ಮೊದಲು ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ಮೇಲಿನ ಮಹಡಿಗೆ ವ್ಯಾಪಿಸಿದೆ ಎನ್ನಲಾಗಿದೆ. ಅಲ್ಲಿ ಒಳಗೆ ಕೆಲವು ಉದ್ಯೋಗಿಗಳು ಊಟ ಮಾಡುತ್ತಿದ್ದರು, ಇನ್ನು ಕೆಲವರು ಕಚೇರಿಯಿಂದ ಹೊರಬಂದಾಗ ಬೆಂಕಿ ಹೊತ್ತಿಕೊಂಡಿದೆ.
ವೈರಲ್ ಆಗಿರುವ ದೃಶ್ಯಗಳಲ್ಲಿ, ಅಗ್ನಿಶಾಮಕದಳ ಸಿಬ್ಬಂದಿ ಜನರನ್ನು ಕಟ್ಟಡದಿಂದ ರಕ್ಷಿಸುತ್ತಿರುವುದು, ಕೆಲವರು ದೇಹದ ಚೀಲಗಳನ್ನು ಹೊತ್ತೊಯ್ದಿದ್ದು, ಇನ್ನು ಕೆಲವರು ಪೋರ್ಟಬಲ್ ಏಣಿಗಳನ್ನು ಬಳಸಿ ರಕ್ಷಣೆ ಮಾಡುತ್ತಿರುವುದು ಕಂಡು ಬಂದಿದೆ.
ಈ ಕುರಿತು ಮಾತನಾಡಿರುವ ಕೇಂದ್ರ ಜಕಾರ್ತಾ ಪೊಲೀಸ್ ಮುಖ್ಯಸ್ಥ ಸುಸತ್ಯೊ ಪೂರ್ಣೊಮೊ ಕೊಂಡ್ರೊ, ಬೆಂಕಿಯನ್ನು ನಂದಿಸಲಾಗಿದ್ದು, ಕಟ್ಟಡದೊಳಗೆ ಇತರ ಬಲಿಪಶುಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮಧ್ಯಾಹ್ನದ ವೇಳೆಗೆ ಸಾವಿನ ಸಂಖ್ಯೆ 20 ಕ್ಕೆ ಏರಿದೆ. ಅಧಿಕಾರಿಗಳು ಜನರ ಸ್ಥಳಾಂತರಿಸುವಿಕೆ ಮತ್ತು ಸುರಕ್ಷತೆಯತ್ತ ಗಮನ ಹರಿಸಿದ್ದಾರೆ ಎಂದು ಹೇಳಿದ್ದಾರೆ.
ದುರಂತ ಸಂಭವಿಸಿರುವ ಕಟ್ಟಡವನ್ನು ಜಪಾನ್ ಮೂಲದ ಟೆರ್ರಾ ಡ್ರೋನ್ ಕಾರ್ಪೊರೇಷನ್‌ನ ಅಂಗಸಂಸ್ಥೆಯಾದ ಟೆರ್ರಾ ಡ್ರೋನ್ ಇಂಡೋನೇಷ್ಯಾ ಆಕ್ರಮಿಸಿಕೊಂಡಿದ್ದು, ಇದು ಗಣಿಗಾರಿಕೆ ಮತ್ತು ಕೃಷಿಯಂತಹ ಕ್ಷೇತ್ರಗಳಿಗೆ ಡ್ರೋನ್ ಸೇವೆಗಳನ್ನು ಒದಗಿಸುತ್ತದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net