ಭಾರತಕ್ಕೆ ಲಷ್ಕರ್ ಉಗ್ರನ ವಾರ್ನಿಂಗ್: ಕಾಶ್ಮೀರ ಯುದ್ಧ ಮುಗಿದಿಲ್ಲ; ಜಗತ್ತು ನಮ್ಮ ಪರವಾಗಿದೆ ಎಂದ ಹಫೀಜ್ ರೌಫ್! Lashkar-e-Taiba

ಹಫೀಜ್ ಅಬ್ದುರ್ ರೌಫ್
ಹಫೀಜ್ ಅಬ್ದುರ್ ರೌಫ್
Published on
ಪಾಕಿಸ್ತಾನ: ಆಪರೇಷನ್ ಸಿಂಧೂರ್ ಸಮಯದಲ್ಲಿ ಅಡಗುತಾಣಗಳನ್ನು ನಾಶಪಡಿಸಿದ ನಂತರ ಪಾಕಿಸ್ತಾನಿ ಸೇನಾಧಿಕಾರಿಗಳ ಜತೆ ಹತ್ಯೆಗೀಡಾದ ಭಯೋತ್ಪಾದಕರ ಅಂತ್ಯಕ್ರಿಯೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಲಷ್ಕರ್-ಎ-ತೈಬಾ (Lashkar-e-Taiba) ಕಮಾಂಡರ್ ಹಫೀಜ್ ಅಬ್ದುರ್ ರೌಫ್, ಜಾಗತಿಕ ಶಕ್ತಿಗಳು ಪಾಕಿಸ್ತಾನದ ಪರವಾಗಿ ಬದಲಾಗಿವೆ ಎಂಬ ಹೇಳಿಕೆ ನೀಡಿದ್ದಾರೆ.
ಅಮೆರಿಕದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಮತ್ತು ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಅವರ ಆಪ್ತ ಸಹಚರರಾದ ರೌಫ್, ಟರ್ಕಿ ಮತ್ತು ಬಾಂಗ್ಲಾದೇಶ ಈಗ ಇಸ್ಲಾಮಾಬಾದ್​ನ್ನು  ಬೆಂಬಲಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ನಿನ್ನೆಯವರೆಗೂ ನಾವು ಒಂಟಿಯಾಗಿದ್ದೆವು, ಮತ್ತು ಇಡೀ ಜಗತ್ತು ಭಾರತದೊಂದಿಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ ಟರ್ಕಿ ಪಾಕಿಸ್ತಾನದೊಂದಿಗಿದೆ, ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಇಸ್ಲಾಮಾಬಾದ್‌ನಲ್ಲಿದ್ದಾರೆ. ಈಗ, ಇಡೀ ಜಗತ್ತು ಪಾಕಿಸ್ತಾನದತ್ತ ವಾಲುತ್ತಿದೆ ಎಂದು ಅವರು ಹೇಳಿದರು.ಮುಜಾಹಿದ್ದೀನ್‌ಗಳ ಹೊಸ ಯುಗ ಪ್ರಾರಂಭವಾಗಿದೆ, ಇದರಲ್ಲಿ ಪಾಕಿಸ್ತಾನ ಗೆಲ್ಲುತ್ತದೆ ಎಂದು ಹೇಳಿದರು.
ಕಳೆದ ವರ್ಷ, ಎಲ್‌ಇಟಿ ಕಮಾಂಡರ್  ಹಫೀಜ್ ಅಬ್ದುರ್ ರೌಫ್ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಮುನ್ನಡೆಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದಾಗ, ಪಾಕಿಸ್ತಾನ ಸೇನೆಯು ಅವರನ್ನು ಭಯೋತ್ಪಾದಕ ಎಂದು ತಳ್ಳಿಹಾಕಿ, ಬದಲಿಗೆ ಅವರನ್ನು ಧರ್ಮಗುರು ಎಂದು ಕರೆದಿತ್ತು.
ಈಗ ವೈರಲ್​ ಆಗುತ್ತಿರುವ ವೀಡಿಯೊದಲ್ಲಿ, ರೌಫ್,  ಭಾರತ ತಕ್ಕ ಪಾಠವನ್ನು ಕಲಿತಿದೆ ಮತ್ತು ಮುಂದಿನ 50 ವರ್ಷಗಳ ಕಾಲ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಧೈರ್ಯ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಪಾಕಿಸ್ತಾನ ಮೂಲದ ಭಯೋತ್ಪಾದಕನ ಪ್ರಚೋದನಕಾರಿ ಹೇಳಿಕೆಯಲ್ಲಿ, ಮೇ 6 ಮತ್ತು 7 ರಂದು ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿ ನಡೆದ ಘಟನೆಗಳು ತಮ್ಮ ಹಾದಿಯಲ್ಲಿ ಸಾಗಿವೆ ಎಂದು ಹೇಳಿದ್ದಾನೆ.
ಆದರೆ ಪಾಕಿಸ್ತಾನವು ಮೇ 10 ರಂದು ಅಲ್ಲಾಹನ ಸಹಾಯದಿಂದ ನಿರ್ಣಾಯಕ ಪ್ರತಿಕ್ರಿಯೆಯನ್ನು ನೀಡಿದ್ದು, ಇದರಿಂದಾಗಿ ಭಾರತವು ಪಾಕಿಸ್ತಾನವನ್ನು ಕಣ್ಣೆತ್ತಿ ಸಹ ನೋಡಲು ಸಹ ಸಾಧ್ಯವಾಗಲಿಲ್ಲ ಎಂದಿದ್ದಾನೆ. ಪಾಕಿಸ್ತಾನ ಮೂಲದ ಭಯೋತ್ಪಾದಕನ ಹೊಸ ಎಚ್ಚರಿಕೆಯು ಭಾರತದ ಮೇಲೆ ದಾಳಿಗಳಿಗೆ ಬಹಿರಂಗವಾಗಿ ಕರೆ ನೀಡುವ ಪ್ರಚೋದನಕಾರಿ ಭಾಷಣದಲ್ಲಿ ಕಾಣಿಸಿಕೊಂಡ ಒಂದು ತಿಂಗಳ ನಂತರ ಬಂದಿದೆ.
ವೀಡಿಯೊದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವ ಕಡಿಮೆಯಾಗಿದೆ ಎಂಬ ಯಾವುದೇ ಸಲಹೆಯನ್ನು ರೌಫ್ ತಳ್ಳಿಹಾಕಿ, ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ಪ್ರತಿಪಾದಿಸಲು ಆಕ್ರಮಣಕಾರಿ ಭಾಷೆಯನ್ನು ಬಳಸಿದ್ದಾರೆ. ಕಾಶ್ಮೀರದ ಯುದ್ಧ ಇನ್ನೂ ಮುಗಿದಿಲ್ಲ ಎಂದಿರುವ ರೌಫ್,  ಈ ಪ್ರದೇಶದವನ್ನು ನಿರಂತರ ಹಿಂಸಾಚಾರಕ್ಕೆ ಒಳಪಡಿಸುವ ಎಚ್ಚರಿಕೆಯನ್ನು ನೀಡಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net