ಇರಾನ್ ಹೇಳಿಕೆಯಂತೆ, ಹೋರ್ಮೊಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ನ್ಯಾವಿಗೇಷನ್, ಪರಿಸರ, ಇಂಧನ, ವಿಮೆ ಹಾಗೂ ಸುರಕ್ಷತೆ ಸೇರಿದಂತೆ ವಿವಿಧ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಈ ನಿರ್ಧಾರ ‘ಹೋರ್ಮೊಜ್ ಜಲಸಂಧಿಯ ಭದ್ರತೆ ಮತ್ತು ಪ್ರಗತಿಗಾಗಿ ಕಾರ್ಯತಂತ್ರದ ಕ್ರಮ’ ಯೋಜನೆಯ ಆರ್ಟಿಕಲ್ 3ರ ಭಾಗವಾಗಿದೆ ಎಂದು ರೆಜಾಯೀ ತಿಳಿಸಿದ್ದಾರೆ. ಶುಲ್ಕವನ್ನು ಇರಾನಿ ರಿಯಾಲ್ ಮಾತ್ರವಲ್ಲದೆ, ಇರಾನ್ ಕೇಳುವ ಯಾವುದೇ ಕರೆನ್ಸಿಯಲ್ಲಿ ಪಾವತಿಸಬಹುದು ಎಂದು ಅವರು ಹೇಳಿದ್ದಾರೆ.