ವಾಸ್ತವದಲ್ಲಿ, ಭಾರತ ಮತ್ತು ಇರಾನ್ ನಡುವೆ ವಾಣಿಜ್ಯ ಸಂಬಂಧಗಳು ಉತ್ತಮವಾಗಿವೆ. ಎರಡೂ ದೇಶಗಳ ನಡುವೆ ವ್ಯಾಪಾರ ಕೊಡುಕೊಳ್ಳುವಿಕೆ ಇದೆ. ಇರಾನ್ನಿಂದ ಭಾರತವು ಒಣಹಣ್ಣುಗಳು (ಡ್ರೈಫ್ರೂಟ್ಸ್), ಸಾವಯವ ರಾಸಾಯನಿಕಗಳು ಮತ್ತು ಗಾಜಿನ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಲ್ಲದೆ, ಭಾರತವು ಇರಾನ್ಗೆ ಬಾಸ್ಮತಿ ಅಕ್ಕಿ, ಚಹಾಪುಡಿ, ಸಕ್ಕರೆ, ಔಷಧಗಳು, ಮಾನವನಿರ್ವಿುತ ನಾರು ಉತ್ಪನ್ನಗಳು, ವಿದ್ಯುತ್ ಯಂತ್ರೋಪಕರಣಗಳು ರಫ್ತು ಮಾಡುತ್ತಿದೆ.