ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನರಮೇಧ: ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ಫೈರಿಂಗ್; 16 ನಿರಾಯುಧ ನಾಗರಿಕರು ಬಲಿ! Pakistan Army Fires on Protesters
ಪಾಕಿಸ್ತಾನ ಸೇನೆ ನಡೆಸಿದ ಭೀಕರ ಗುಂಡಿನ ದಾಳಿಗೆ16 ನಿರಾಯುಧ ನಾಗರಿಕರು ಬಲಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಾಕ್ ಆಕ್ರಮಿತ ಕಾಶ್ಮೀರದ (PoK) ರಾವಲಕೋಟ್‌ನಲ್ಲಿ ಮಹಾ ನರಮೇಧ!
ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದ 70 ಸಾವಿರಕ್ಕೂ ಅಧಿಕ ಜನ
ಪಾಕಿಸ್ತಾನ ಸೇನೆ ನಡೆಸಿದ ಭೀಕರ ಗುಂಡಿನ ದಾಳಿಗೆ16 ನಿರಾಯುಧ ನಾಗರಿಕರು ಬಲಿ
ಪಿಓಕೆ: ಪಾಕ್ ಆಕ್ರಮಿತ ಕಾಶ್ಮೀರದ ರಾವಲಕೋಟ್‌ನಲ್ಲಿ ನಾಗರಿಕ ಹಕ್ಕುಗಳಿಗಾಗಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಜನ ಸಮೂಹದ ಮೇಲೆ ಪಾಕಿಸ್ತಾನದ ಸೇನೆ ಗುಂಡಿನ ದಾಳಿ (Pakistan Army Fires on Protesters) ನಡೆಸಿದ ಪರಿಣಾಮ ಸುಮಾರು 16 ಜನ ಮೃತಪಟ್ಟಿದ್ದಾಗಿ ವರದಿಯಾಗಿದೆ.
ನಾಗರಿಕ ಹಕ್ಕುಗಳನ್ನು ಪಡೆಯಲು ಶಾಂತಯುತವಾಗಿ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪಾಕ್ ಸೇನೆ ದಿಡೀರ್ ದಾಳಿ ನಡೆಸಿದ ಹಿನ್ನಲೆ, ನೂರಾರು ಜನ ಗಾಯಗೊಂಡಿದ್ದು, ಜನರಲ್ಲಿ ಆಕ್ರೋಶ ತೀವ್ರವಾಗಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ, ಸುಮಾರು 60 ರಿಂದ 70 ಸಾವಿರ ಜನರು ಪಾಕಿಸ್ತಾನದಲ್ಲಿ ತಮಗೆ ಸಿಗಬೇಕಾದ ನಾಗರಿಕ ಹಕ್ಕುಗಳು ದೊರೆಯುತ್ತಿಲ್ಲ, ನಾವು ಸಹ ಈ ದೇಶದ ಪ್ರಜೆಗಳು ಎಂಬ ಹಿನ್ನಲೆಯಲ್ಲಿ ಹೋರಾಟ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.
ರಾವಲಕೋಟ್‌ನಲ್ಲಿ ರಕ್ತದೊಕುಳಿ
ಹೀಗೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಜನರ ಮೇಲೆ ಪಾಕಿಸ್ತಾನದ ರೇಂಜರ್ಗಳು ಒಂದೇ ಸಮನೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸುಮಾರು 16 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 37 ಜನ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಜನ ಓಡಲಾರಂಭಿಸಿದ್ದು, ಸ್ಥಳದಲ್ಲಿ ಅಕ್ಷರಶಃ ರಕ್ತದ ಹೊಳೆ ಹರಿದಿದೆ ಎಂದು ಬಣ್ಣಿಸಲಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಪಿಓಕೆ ಅಲ್ಲಿರುವ ಜನ ಪಾಕ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಇಲ್ಲಿವರೆಗೆ ಸುಮಾರು 53 ನಿರಾಯುಧ ನಾಗರಿಕರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಯಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯ ಜನ ಪಾಕ್ ಸರ್ಕಾರ ಹಾಗೂ ಸೇನೆ ಮೇಲೆ ಕೆಂಡಕಾರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ತೀವ್ರವಾದ ಪ್ರತಿಭಟನೆಗೆ ಮುಂದಾಗಲಿದ್ದಾರೆಂದು ಸ್ಥಳೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ, (ಏಜನ್ಸೀಸ್).