ಮಧ್ಯಪ್ರಾಚ್ಯದ ವಿವಿಧ ದೇಶಗಳಲ್ಲಿ ಮತ್ತು ಅಲ್ಲಿನ ಸಮುದ್ರ ಮಾರ್ಗಗಳಲ್ಲಿ ಸಾವಿರಾರು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಲ್ಲಿ ಈಗ ಭಾರತೀಯನ ಹೆಣ ಬಿದ್ದಿರುವುದು ವಿದೇಶದಲ್ಲಿರುವ ನಾವಿಕರ ಕುಟುಂಬಗಳಲ್ಲಿ ನಡುಕ ಹುಟ್ಟಿಸಿದೆ. ಇದು ಕೇವಲ ಒಂದು ಹಡಗಿನ ಮೇಲಿನ ದಾಳಿಯಲ್ಲ, ಬದಲಾಗಿ ಅಂತರಾಷ್ಟ್ರೀಯ ಜಲಮಾರ್ಗದ ಸುರಕ್ಷತೆಗೆ ಎದುರಾದ ದೊಡ್ಡ ಸವಾಲಾಗಿದೆ ಎಂದು ಜಾಗತಿಕ ರಾಜಕೀಯ ಪರಿಣಿತರ ಅಭಿಪ್ರಾಯವಾಗಿದೆ,(ಏಜನ್ಸೀಸ್).