ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಘೋಷಣೆ: ಯುದ್ಧ ನಿಲ್ಲಿಸಿದ್ದೆ ಶಹಬಾಜ್​ ಶರೀಫ್​ ಮತ್ತು ಆಸೀಮ್​ ಮುನೀರ್; ನೊಬೆಲ್ ಪ್ರಶಸ್ತಿ ಬೇಡಿಕೆಯಿಟ್ಟ ಪಾಕ್​! Nobel Peace Prize

ಶಾಂತಿ ಸ್ಥಾಪಿಸಿದ್ದು ನಮ್ಮ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥ ಎಂದ ಪಾಕ್​ ಮಾಧ್ಯಮ
ಶಾಂತಿ ಸ್ಥಾಪಿಸಿದ್ದು ನಮ್ಮ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥ ಎಂದ ಪಾಕ್​ ಮಾಧ್ಯಮ
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಘೋಷಣೆ
  • ಶಾಂತಿ ಸ್ಥಾಪಿಸಿದ್ದು ನಮ್ಮ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥ ಎಂದ ಪಾಕ್​ ಮಾಧ್ಯಮ
  • ಶಹಬಾಜ್​ ಶರೀಫ್​ ಮತ್ತು ಆಸೀಮ್​ ಮುನೀರ್​ಗೆ ನೊಬೆಲ್​ ಶಾಂತಿ ಪ್ರಶಸ್ತಿ ನೀಡಿ ಎಂದ ಪಾಕ್​ ಮಾಧ್ಯಮ
  • ಲೆಬನಾನ್​ ಮೇಲೆ ಇಸ್ರೇಲ್​ ವೈಮಾನಿಕ ದಾಳಿ
  • ಮುರಿದು ಬೀಳುತ್ತಾ ಪಾಕಿಸ್ತಾನದ ಶಾಂತಿ ಒಪ್ಪಂದ?
ಪಾಕಿಸ್ತಾನ: ಅಮೆರಿಕ ಈಗ 14 ದಿನಗಳ ಕದನ ವಿರಾಮವನ್ನು ಘೋಷಿಸಿದ ಬೆನ್ನಲ್ಲೆ, ಕೆಳೆದ 40 ದಿನಗಳಿಂದ ಸಂಘರ್ಷಮಯವಾಗಿದ್ದ ಮಧ್ಯಪ್ರಾಚ್ಯದಲ್ಲಿ ಈಗ ತಾತ್ಕಾಲಿಕ ಶಾಂತಿ ಸ್ಥಾಪನೆಯಾಗಿದೆ. ಆದರೆ ಈ ಶಾಂತಿ ಸ್ಥಾಪನೆಯಲ್ಲಿ ನಮ್ಮ ದೇಶದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಪಾತ್ರ ಪ್ರಮುಖವಾಗಿದ್ದು, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize) ನೀಡಬೇಕೆನ್ನುವುದು ಪಾಕಿಸ್ತಾನ ಮಾಧ್ಯಮದ ಬಯಕೆಯಾಗಿದೆ.

ನಮ್ಮ ನಾಯಕರು ಯುದ್ಧವನ್ನು ನಿಲ್ಲಿಸಿದ್ದಾರೆ!

ಪಶ್ಚಿಮ ಏಷ್ಯಾದಲ್ಲಿ ಕಳೆದೊಂದು ತಿಂಗಳಿನಿಂದ ನಿರಂತರ ಅಶಾಂತಿ ನೆಲೆಸಿದ್ದು, ಇದರಿಂದ ಪ್ರಪಂಚದ ನಾನಾ ದೇಶಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಆದರೆ ಈ ಯುದ್ಧದಲ್ಲಿ ಶಾಂತಿನ್ನು ಸ್ಥಾಪಿಸುವಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ಶಹಬಾಜ್​ ಶರೀಫ್ ಮತ್ತು ಫೀಲ್ಡ್​ ಮಾರ್ಷಲ್​ ಆಸೀಮ್ ಮುನೀರ್​ ಅವರ ಪಾತ್ರ ಪ್ರಮುಖವಾಗಿದೆ.
ಇವರಿಬ್ಬರು ಈ ಯುದ್ಧ ಇನ್ನಷ್ಟು ಭೀಕರತೆಗೆ ಹೋಗುವುದನ್ನು ತಪ್ಪಿಸಿ, ಮಾನವ ಸಂಕುಲದ ನಾಶವನ್ನು ತಡೆದಿರುವ ಕಾರಣಕ್ಕಾಗಿ ಇವರಿಗೆ ಅಂತರಾಷ್ಟ್ರೀಯ ನೊಬೆಲ್​ ಶಾಂತಿ ಪ್ರಶಸ್ತಿಯನ್ನು ನೀಡಬೇಕೆಂದು ಪಾಕಿಸ್ತಾನದ ಮಾಧ್ಯಮಗಳು ಮೊರೆಯಿಟ್ಟಿವೆ.

ಮಾತು-ಕತೆ ಇಸ್ಲಾಮಾಬಾದ್​ನಲ್ಲಿ ನಡೆಯಲಿದೆ

ಸದ್ಯ ಈಗ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದ್ದು, ಈ ಸಂಘರ್ಷದ ಪೂರ್ಣ ವಿರಾಮವು ಇಸ್ಲಾಮಾಬಾದ್​ನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನ ಹೇಳುತ್ತಿದೆ.
ಇನ್ನೇನು ಕೆಲ ದಿನಗಳಲ್ಲಿ ಅಮೆರಿಕ ಮತ್ತು ಇರಾನಿನ ಕಡೆಯವರು ನಮ್ಮ ರಾಜಧಾನಿಗೆ ಆಗಮಿಸಿ ಶಾಂತಿ ಸಂವಾದ ನಡೆಸಲಿದ್ದು, ನಾವು ಅದಕ್ಕೆ ತಯಾರಿ ನಡೆಸುತ್ತಿದ್ದೆವೆ ಎಂದ ಪಾಕ್​ ಪ್ರಧಾನಿ ಶಹಬಾಜ್​ ಶರೀಫ್​ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಏಪ್ರಿಲ್​ 10 (ಶುಕ್ರವಾರ) ಈ ಶಾಂತಿ ಸಂಧಾನ ಸಭೆ ನಡೆಯಲಿದ್ದು, ಈ ಮಾತುಕತೆ ಯಶಸ್ವಿಯಾಗಲಿದೆ ಎಂದು ನಾವು ಆಶಿಸುತ್ತೆವೆ. ಮುಂಬರುವ ದಿನಗಳಲ್ಲಿ ಒಳ್ಳೆಯ ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.

ಲೆಬನಾನ್​ ಮೇಲೆ ಇಸ್ರೇಲ್​ ದಾಳಿ

ಕದನ ವಿರಾಮ ಘೋಷಣಯಾಗಿದ್ದರೂ ಸಹ ಇಸ್ರೇಲ್​, ಲೆಬನಾನ್​ ಮೇಲೆ ದಾಳಿ ಮುಂದುವರಿಸಿದೆ. ಕೇವಲ 10 ನಿಮಿಷದಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 250 ಜನ ಮೃತರಾದರೆ, 800 ಕ್ಕೂ ಅಧಿಕ ಜನ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈ ದಾಳಿಯನ್ನು ಇರಾನ್​ ಖಂಡಿಸಿದ್ದು, ನಮ್ಮ ಕದನ ವಿರಾಮ ಷರತ್ತಿನಲ್ಲಿ ಲೆಬನಾನ್​ ಮೇಲೆ ದಾಳಿ ಮಾಡಕೂಡದು ಎಂಬ ಅಂಶ ಸಹ ಇತ್ತು ಅದನ್ನು ಇಸ್ರೇಲ್​ ಮುರಿದಿದೆ. ಇದೇ ರೀತಿಯ ಬೆಳವಣಿಗೆ ಮುಂದುವರಿದರೆ ನಾವು ಹಾರ್ಮುಜ್​ನ್ನು ಮತ್ತೆ ಸ್ಥಗಿತಗೊಳಿಸುವುದಾಗಿ ಬೆದರಿಕೆ ಒಡ್ಡಿದೆ.
ಅದರೆ ಈ ಶಾಂತಿ ಒಪ್ಪದ್ದಕ್ಕೆ ಕ್ಯಾರೆ ಇನ್ನದ ಇಸ್ರೇಲ್​ ನಾವು ಇರಾನ್ ಜೊತೆಗಿನ ಅಮೆರಿಕದ ಕದನ ವಿರಾಮವನ್ನು ಒಪ್ಪುತ್ತೇವೆ. ಅದರೆ ನಾವು ಲೆಬನಾನ್​ ಮೇಲೆ ದಾಳಿ ಮಾಡುವುದನ್ನು ಯಾವುದೇ ಕಾರಣಕ್ಕೆ ನಿಲ್ಲಿಸಲ್ಲ ಎಂದು ಇಸ್ರೇಲ್​ ಪ್ರಧಾನಿ ಬೆಂಜಾಮಿನ್​ ನೆತನ್ಯಾಹು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net