ಲೆಬನಾನ್​ನಲ್ಲಿ ರಕ್ತಪಾತ: ಹಿಜ್ಬೊಲ್ಲಾ ಅಡ್ಡೆಗಳ ಮೇಲೆ ಇಸ್ರೇಲ್ ಬಾಂಬಿಂಗ್​; 31 ಸಾವು,149 ಮಂದಿಗೆ ಗಾಯ | Lebanon Israel

ಲೆಬನಾನಿನ ಹಿಜ್ಬೊಲ್ಲಾ ಸಂಘಟನೆ ಮೇಲೆ ಇಸ್ರೇಲ್​ ದಾಳಿ
ಲೆಬನಾನಿನ ಹಿಜ್ಬೊಲ್ಲಾ ಸಂಘಟನೆ ಮೇಲೆ ಇಸ್ರೇಲ್​ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಇರಾನಿನ ಸವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸಾವು
  • ಪ್ರತೀಕಾರಕ್ಕೆ ಮುಂದಾದ ಲೆಬಾನಾನ್ ಮೇಲೆ ಇಸ್ರೇಲ್​ ಪ್ರತಿದಾಳಿ
  • 31 ಜನ ಸಾವು ಮತ್ತು 149 ಜನ ಗಾಯಗೊಂಡಿರುವುದಾಗಿ ಮಾಹಿತಿ
ಬೈರುತ್: ಇಸ್ರೇಲ್​ ಮೇಲೆ ಲೆಬಾನಾನಿನ ಸಂಘಟನೆ ಹಿಜ್ಬೊಲ್ಲಾ ರಾಕೆಟ್​ ಮತ್ತು ಡ್ರೋಣ್​ ದಾಳಿ ಮಾಡಿದ ನಂತರ ಬೈರುತ್‌ ಮೇಲೆ ಇಸ್ರೇಲ್ (Lebanon Israel) ನಡೆಸಿದ ಪ್ರತಿದಾಳಿಗೆ ಸುಮಾರು 31 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಲೆಬನಾನಿನ ಬೈರುತ್​ ಮೇಲೆ ಇಸ್ರೇಲ್​ ದಾಳಿ ನಡೆಸಿದ ಪರಿಣಾಮ 31 ಜನ ಸಾವನ್ನಪ್ಪಿದ್ದು ಸುಮಾರು 149 ನಾಗರಿಕರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಸೋಮವಾರ (ಮಾ.2) ತಿಳಿಸಿದೆ.
ಇರಾನಿನ ಸವೋಚ್ಚ ನಾಯಕ ಆಯತೊಲ್ಲಾ ಖಮೇನಿ ಸಾವನ್ನಪ್ಪಿದ ನಂತರ ಲೆಬನಾನ್​ ತನ್ನ ಶತ್ರು ದೇಶ ಇಸ್ರೇಲ್​ ಮೇಲೆ ರಾಕೆಟ್​ ಮತ್ತು ಡ್ರೋಣ್​ಗಳ ಮೂಲಕ ದಾಳಿ ಮಾಡಿತು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸೋಮವಾರ ಇಸ್ರೇಲ್​ ಲೆಬನಾನ್​ ಮೇಲೆ ದಾಳಿ ನಡೆಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಹಿಜ್ಬೊಲ್ಲಾ ನಮ್ಮ ಮೇಲೆ ವಿನಾಕಾರಣ ದಾಳಿ ಮಾಡಿದ ಹಿನ್ನಲೆ, ನಾವು ಅವರ ಭಯೋತ್ಪಾದಕ ನೆಲೆಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಿರುವುದಾಗಿ ಇಸ್ರೇಲ್​ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಖಮೇನಿ ಸಾವಿನ ಪ್ರತೀಕಾರಕ್ಕಾಗಿ ಈ ದಾಳಿ
ಅಯತೊಲ್ಲಾ ಖಮೇಲಿ ಅವರ ಸಾವಿಗೆ ಕಾರಣರಾದವರನ್ನು ನಾವು ಉಳಿಸುವುದಿಲ್ಲ, ಅದಕ್ಕಾಗಿ ನಾವು ಇಸ್ರೇಲ್​ ಮೇಲೆ ದಾಳಿ ಮಾಡಿದ್ದೆವೆ ಎಂದು ಹಿಜ್ಬೊಲ್ಲಾ ಸಂಘಟನೆ ಒಪ್ಪಿಕೊಂಡಿದೆ. ಇಸ್ರೇಲ್​ನಿಂದ ಲೆಬನಾನ್​ಗೆ ಆತಂಕವಿರುವ ಕಾರಣ ನಾವು ಅವರ ಮೇಲೆ ರಾಕೆಟ್​ ಹಾಗೂ ಡ್ರೋನ್​ಗಳ ಮೂಲಕ ದಾಳಿ ಮಾಡಿರುವುದಾಗಿ ಹಿಜ್ಬೊಲ್ಲಾ ಸ್ಪಷ್ಟ ಪಡಿಸಿದೆ.

ಮುರಿದು ಬಿದ್ದ ಕದನ ವಿರಾಮ

2024 ರ ಸಮಯದಲ್ಲಿ ಇಸ್ರೇಲ್ ಮತ್ತು ಲೆಬನಾನ್​ ನಡುವೆ ಕದಮವಿರಾಮ ಘೋಷಣೆಯಾಗಿತ್ತು. ಆದರೆ ಈಗ ಇರಾನ್​ ಮೇಲೆ ಇಸ್ರೇಲ್​ ದಾಳಿಯ ನಂತರ ಲೆಬನಾನ್, ಇಸ್ರೇಲ್​ ಮೇಲೆ ದಾಳಿ ಮಾಡುವ ಮೂಲಕ ಈ ಕದಮವಿರಾಮ ರದ್ದಾಗಿದೆ. ಈಗ ಲೆಬನಾನಿನ ಭಯೋತ್ಪಾದನಾ ಸಂಘಟನೆ ಹಿಜ್ಬೊಲ್ಲಾ ಮೇಲೆ ದಾಳಿ ಮಾಡಿದ ಇಸ್ರೇಲ್​ ನಮ್ಮ ದಾಳಿ ನಾಗರಿಕರ ಮೇಲಲ್ಲ, ಕೇವಲ ಭಯೋತ್ಪಾದಕರ ನಿರ್ಮೂಲನೆ ನಮ್ಮ ಗುರಿ ಎಂದು ಹೇಳಿಕೆ ನೀಡಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net