ಈ ಬಗ್ಗೆ ತಮ್ಮ ಟ್ರೂತ್ ಸೋಶಿಯಲ್ಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ನ ಹೊಸ ಮತ್ತು ಸ್ವಲ್ಪ ಮಟ್ಟಿಗೆ ವಿವೇಕಯುತ ಎನಿಸಿರುವ ಆಡಳಿತದೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಹೇಳುತ್ತಲೇ ಬೆದರಿಕೆ ಹಾಕಿದ್ದಾರೆ. ಸಂಧಾನ ಯಶಸ್ವಿಯಾಗದಿದ್ದರೆ ಮತ್ತು ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ, ನಾವು ಇರಾನ್ನ ತೈಲ ಕ್ಷೇತ್ರಗಳು, ವಿದ್ಯುತ್ ಸ್ಥಾವರಗಳು ಮತ್ತು ಇತರ ನಿರ್ಣಾಯಕ ಸೌಲಭ್ಯಗಳನ್ನು ಸ್ಫೋಟಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.