ಅಂಡಮಾನ್ ಸಮುದ್ರದಲ್ಲಿ ಬಾಂಗ್ಲಾದ ದೋಣಿ ಮಗುಚಿ 250 ಮಂದಿ ನಾಪತ್ತೆ ಶಂಕೆ | Andaman Sea

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಢಾಕಾ: ಅಂಡಮಾನ್ ಸಮುದ್ರದಲ್ಲಿ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಮಕ್ಕಳು ಸೇರಿದಂತೆ ಸುಮಾರು 250 ಜನ ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ ಎಂದು ಬುಧವಾರ(ಏ. 15) ವರದಿಯಾಗಿದೆ.
ದಕ್ಷಿಣ ಬಾಂಗ್ಲಾದೇಶದ ಟೆಕ್ನಾಫ್‌ನಿಂದ ಹೊರಟು ಮಲೇಷ್ಯಾಕ್ಕೆ ತೆರಳುತ್ತಿದ್ದ ಹಡಗು, ಭಾರೀ ಗಾಳಿ, ಅಲೆಗಳು ಹಾಗೂ ಜನದಟ್ಟಣೆಯಿಂದಾಗಿ ಸಮುದ್ರದಲ್ಲಿ ಮುಳುಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಗಳಲ್ಲಿ ಉತ್ತಮ ವೇತನದ ಭರವಸೆ, ಕಳ್ಳಸಾಗಣೆ ಜಾಲಗಳಿಂದ ಹರಡುವ ತಪ್ಪು ಮಾಹಿತಿಯೊಂದಿಗೆ ಸೇರಿಕೊಂಡು, ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳನ್ನು ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಈ ಘಟನೆಯು ದೀರ್ಘಕಾಲದ ಸ್ಥಳಾಂತರದ ಭೀಕರ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ ಯುಎನ್‌ಹೆಚ್‌ಸಿಆರ್ ಹೇಳಿದೆ.
ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾ ನಿರಾಶ್ರಿತರಿಗೆ ಮತ್ತು ಬಾಂಗ್ಲಾದೇಶದ ಆತಿಥೇಯ ಸಮುದಾಯಗಳಿಗೆ ಬೆಂಬಲ ನೀಡಲು ಮತ್ತು ಹಣದ ಸಹಾಯ ಮಾಡಲು ಅಂತರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net