ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಆಹಾರಕ್ರಮ ಬಹಳ ಮುಖ್ಯ ಎಂದು ಅವರು ತಿಳಿಸಿದ್ದಾರೆ. ಹಾಗಾಗಿ ಆಕೆ ಅತಿಯಾದ ಸಕ್ಕರೆ ಪದಾರ್ಥಗಳು, ಪಾನೀಯಗಳು, ಜಂಕ್ಫುಡ್ ತಿಂಡಿಗಳನ್ನು ತ್ಯಜಿಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೆಯೇ ಹೆಚ್ಚಿನ ಪ್ರೊಟೀನ್ಭರಿತ ಆಹಾರ ಸೇವನೆ, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಹೆಚ್ಚಿನ ನೀರನ್ನು ಸೇವಿಸುವುದಾಗಿ ಮಾಹಿತಿ ಹಂಚಿದ್ದಾರೆ.