ಚಿಕನ್, ಮಟನ್ನಂತಹ ಭಾರಿ ಆಹಾರವನ್ನು ಸೇವಿಸಿದಾಗ ಹೋಟೆಲ್ಗಳಲ್ಲಿ ಸೋಂಪು ಕೊಡೋದನ್ನು ನೋಡೆ ಇರುತ್ತೇವೆ. ಇದನ್ನು ಬೇಕೆಂತಲೇ ಹೆಚ್ಚೆಚ್ಚು ಸೇವನೆ ಮಾಡುತ್ತೀವಿ ಹೌದು. ಅದು ಒಳ್ಳೆಯದು. ಏಕೆಂದರೆ, ಸೋಂಪು ಹೊಟ್ಟೆ ಉಬ್ಬುವಿಕೆ, ಗ್ಯಾಸ್ ಟ್ರಬಲ್, ಅಜೀರ್ಣದಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಸೋಂಪಿನಲ್ಲಿರುವ ಫೈಬರ್ ಮತ್ತು ಅನೆಥೋಲ್ ಎಂಬ ಅಂಶವು ಹೊಟ್ಟೆಯ ಉರಿಯೂತ ತಡೆಯುವ ನೈಸರ್ಗಿಕ ಅಂಶಗಳನ್ನು ಹೊಂದಿರುತ್ತವೆ ಎಂದು ಸೌರಭ್ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.