ಸಂಜೆಯ 'Me Time' ಹೆಸರಲ್ಲಿ ಫೋನ್ ಸ್ಕ್ರೋಲಿಂಗ್: ಮಹಿಳೆಯರಲ್ಲಿ ಹೆಚ್ಚುತ್ತಿದೆ ಮಾನಸಿಕ ಒತ್ತಡ!..Women Mental Health

Womens Mental HealthEvening Scrolling Stress
Womens Mental HealthEvening Scrolling Stress
Published on

ಪ್ರಮುಖ ಮುಖ್ಯಾಂಶಗಳು

  • ರಾತ್ರಿ ನಿದ್ದೆ ಬಿಟ್ಟು ರೀಲ್ಸ್​ ನೋಡೋದು ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ
  • ರೀಲ್ಸ್​ಗಳು ವಿಶ್ರಾಂತಿ ನೆಪದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ
  • ರಾತ್ರಿ ಮಲಗಲು ಹೋಗುವ ಒಂದು ಗಂಟೆ ಮುನ್ನ ಫೋನ್​ ಮುಟ್ಟಲೇ ಬೇಡಿ.

ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಜೀವನದ ಭಾಗವಾಗಿ ಪರಿಣಮಿಸಿದೆ. ಬೆಳಗೆದ್ದ ಕೂಡಲೇ ರೀಲ್ಸ್​ ಸ್ಕ್ರಾಲ್​ ಮಾಡುತ್ತಾ ಕುಳಿತರೆ ಸಾಕು ಒಂದು ಗಂಟೆ ಕಳೆದು ಹೋದ ಬಗ್ಗೆ ಅರಿವು ಇರೋದಿಲ್ಲ.  ಕಡಿಮೆ ಸಮಯದ ಈ ವಿಡಿಯೋಗಳು ಮೆದುಳಿಗೆ ಸ್ಲೋ ಪಾಯ್ಸನ್​ ಇದ್ದಂತೆ ಎಂದು ಎಚ್ಚರಿಕೆ ಕೊಟ್ಟರೂ ಸಹ.. ಮೀ ಟೈಂ ಹೆಸರಲ್ಲಿ ನೋಡುವ ಮೊಬೈಲ್​​ ವೀಕ್ಷಣೆಗೆ ಕಡಿವಾಣವಂತೂ ಬೀಳೋದಿಲ್ಲ. 

ಸಂಶೋಧಕರ ಪ್ರಕಾರ ನಿದ್ದೆ ಮಾಡುತ್ತಾ , ರೀಲ್ಸ್​ ಸ್ಕ್ರಾಲ್​ ಮಾಡುವುದು.. ನಿಮಗೆ ವಿಶ್ರಾಂತಿ ನೀಡೋದಿಲ್ಲ. ಬದಲಾಗಿ ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ.  ಇದರಿಂದ ಮನಸ್ಸಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ, ಸಿಟ್ಟು ಬಂದಾಗ ಅಥವಾ ದುಃಖವಾದಾಗ, ಸಂತಸಕ್ಕೊಳಗಾದ ಮನುಷ್ಯರೊಂದಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನೇ ಮರೆತು ಬಿಡುತ್ತೇವೆ ಎನ್ನುವ ಭಯಾನಕ ಅಂಶವನ್ನು ಬಹಿರಂಗಪಡಿಸಲಾಗಿದೆ. ನೀವು ಮೊಬೈಲ್​ ನೋಡಿ, ಎತ್ತಿಟ್ಟಾಗ ನಿಮಗೆ ಈ ರೀತಿ  ವಿಚಾರಗಳು ಗಮನಕ್ಕೆ ಬಂದರೆ ಇಂದಿನಿಂದಲೇ ಎಚ್ಚೆತ್ತುಕೊಳ್ಳಿ.

ವಿಶ್ರಾಂತಿ ಪಡೆದರೂ ಒತ್ತಡ ಹೆಚ್ಚಳ

ಸಾಮಾನ್ಯವಾಗಿ ಈ ಹಿಂದೆ ಏಳಕ್ಕೆ ಊಟ ಮಾಡಿ ಎಂಟು ಮತ್ತು ಒಂಭತ್ತು ಗಂಟೆಗೆಲ್ಲ ನಿದ್ರಿಸುತ್ತಿದ್ದರು. ಈಗಲೂ ಇಂತಹ ವಾಡಿಕೆ ಹಲವು ಹಳ್ಳಿಗಳಲ್ಲಿ ಇದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಕೆಲಸ ಹಾಗೂ ಮೊಬೈಲ್​ನಲ್ಲಿ ನಿಮಿಷಕ್ಕೊಂದು ಸಿಗುವ ರೀಲ್ಸ್​ ನೋಡುವುದು,. ಯೂಟ್ಯೂಬ್​​, ಫೇಸ್​ಬುಕ್​ ಬಳಕೆ ವಿಶ್ರಾಂತಿ ಮೋಡ್​ನಲ್ಲಿ ಇರಿಸಿದ್ದರು ಮಾನಸಿಕ ಹಾಗೂ ದೈಹಿಕವಾಗಿ ನಿಮ್ಮನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತಿರುತ್ತದೆ. ಇಂತಹ  ಬದಲಾವಣೆ ಕಂಡುಬಂದರೆ ಮೊಬೈಲ್​ ಬಳಕೆ ಮಾಡುವುದನ್ನು ಇಂದಿನಿಂದಲೇ ಕಡಿಮೆ ಮಾಡಿ.

ಮಹಿಳೆಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತೆ ಯಾಕೆ?

ಮಹಿಳೆಯರು ದಿನಪೂರ್ತಿ ಆಫೀಸ್​ ಕೆಲಸ, ಮನೆಯಲ್ಲಿ ಮಕ್ಕಳು, ಪತಿ ಆರೈಕೆ, ಅಡುಗೆ ಹೀಗೆ ಸಾಕಷ್ಟು ಕೆಲಸಗಳಲ್ಲಿ ತಮ್ಮನ್ನು ತಾವು ಒಳಪಡಿಸಿಕೊಂಡಿರುತ್ತಾರೆ. ಈ ಮಧ್ಯೆ ಅವರಿಗೆ ಸಿಗುವ ಕೊಂಚ ಸಮಯದಲ್ಲಿ  ಎಂಟರ್​ಟೇನ್​​​ಮೆಂಟ್​ಗಾಗಿ ಹಾಗೂ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇವೆ ಎನ್ನುವ ಮೂಲಕ ಮೊಬೈಲ್​ ಸ್ಕ್ರಾಲ್​ ಮಾಡೋದನ್ನು ಅಭ್ಯಾಸ ಮಾಡಿಕೊಂಡು ಗಂಟೆ ಗಟ್ಟಲೇ ಅದರಲ್ಲೇ ಕಳೆದಿರುತ್ತಾರೆ. ಈ  ವಿಧಾನವು ಮಕ್ಕಳು, ಪತಿಯೊಂದಿಗೆ  ರಿಯಾಕ್ಟ್​​ ಮಾಡುವುದು 

ಹೇಗೆ

 ಎನ್ನುವುದನ್ನೇ ಮರೆಸಲು ಶುರುಮಾಡುತ್ತದೆ

ಫೋನ್​ ಬದಲಿಗೆ ಹೀಗೆ ಮಾಡಿ

ಮೊಬೈಲ್​​ ಬಳಕೆಯು ಮೆದುಳಿನ ಆರೋಗ್ಯದ ಮೇಲೆ ಹಾಗೂ ಮಾನಸಿಕ ಚಿಂತನೆಗಳ ಮೇಲೆ ಪರಿಣಾಮ ಬೀರುವ ಕಾರಣ ನೀವು..ಈ ಸಾಧನ ಬಳಕೆಯನ್ನು ಕಡಿಮೆ ಮಾಡಬೇಕು ಎನ್ನುವ ನಿಯಮ ಹಾಕಿಕೊಂಡರೆ ಹೀಗೆ ಮಾಡಿ..
ನಿತ್ಯ ಧಾರ್ಮಿಕ ಪುಸ್ತಕ ಅಥವಾ ಕತೆ, ಕಾದಂಬರಿ 30 ನಿಮಿಷ ಓದಿ. ಮಲಗುವ ಒಂದು ಗಂಟೆ ಮುನ್ನ ಮೊಬೈಲ್​ ಅನ್ನು ಯಾವುದಾದರೂ ಕಪಾಟಿನಲ್ಲಿ ಇಟ್ಟುಬಿಡಿ.  ಸಂಗೀತ ಕೇಳುವುದು, ವ್ಯಾಯಾಮಾ ಮಾಡುವುದು, ಪತ್ರಿಕೆ ಓದುವುದು, ಮಕ್ಕಳು, ಕುಟುಂಬದೊಂದಿಗೆ ಸಮಯ ಕಳೆಯುವ ಅಭ್ಯಾಸ ಮಾಡಿಕೊಳ್ಳಿ. 

'Me Time' ಹೆಸರಲ್ಲಿ ಫೋನ್ ಸ್ಕ್ರೋಲಿಂಗ್

ಸಂಜೆ ಮೀ ಟೈಂ ಎಂಬ ಹೆಸರಿನಲ್ಲಿ ಮಹಿಳೆಯರು ರಾತ್ರಿ ಪೂರ ರೀಲ್ಸ್​, ಶಾರ್ಟ್ಸ್​ ನೋಡುತ್ತಾ ನಿದ್ದೆ ಗೆಡುತ್ತಿದ್ದಾರೆ. ಇದು ಅವರ ನಿದ್ದೆ ಹಾಗೂ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಸಂಶೋಧನೆಯೊಂದು ವರದಿಯಲ್ಲಿ ಉಲ್ಲೇಖಿಸಿದೆ, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂ

ತರ್ಜಾಲದಿಂ

ದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net