ರಾತ್ರಿ ಕಣ್ಣು ಮುಚ್ಚಿದ ತಕ್ಷಣ, ನಮ್ಮ ಕಣ್ಣುಗಳು ಮಾತ್ರವಲ್ಲ, ಮಿದುಳು ಕೂಡ ಕಂಪ್ಲೀಟ್ ರೆಸ್ಟ್ ಮೋಡ್ಗೆ ಹೋಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಅದು ನೀವು ಅಂದುಕೊಂಡಂತಿಲ್ಲ. ದೇಹ ವಿಶ್ರಾಂತಿಗೆ ಜಾರಿದಾಗಲೂ ನಮ್ಮ ಮಿದುಳು ಮಾತ್ರ ತನ್ನದೇ ಆದ ಕೆಲಸದಲ್ಲಿ ಸಖತ್ ಬಿಜಿಯಾಗಿರುತ್ತದೆ. ದಿನವಿಡೀ ಸಂಗ್ರಹವಾದ ಮಾಹಿತಿಯನ್ನು ಜೋಡಿಸುವುದರಿಂದ ಹಿಡಿದು ದೇಹದ ಹಲವು ಪ್ರಕ್ರಿಯೆಗಳನ್ನು ಹತೋಟಿಗೆ ತರುವಲ್ಲಿ, ಮಿದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ.