ಉಗುರಿನಲ್ಲಿ ಉಂಟಾದ ಸೋಂಕನ್ನು ತಡೆಯಲು ಶಿಲೀಂಧ್ರನಾಶಕ ಪುಡಿಗಳು ಮತ್ತು ಸ್ಪ್ರೇಗಳನ್ನು ನಿಯಮಿತವಾಗಿ ಬಳಸುವುದರಿಂದ ಸೋಂಕು ಪುನಃ ಬರದಂತೆ ತಡೆಯಲು ಸಹಾಯವಾಗುತ್ತದೆ. ಹಾಗೆಯೇ ಅಧಿಕ ಪೌಷ್ಟಿಕಾಂಶ, ಪ್ರೋಟೀನ್, ಸತು, ಕಬ್ಬಿಣ ಮತ್ತು ಬಯೋಟಿನ್ ಇರುವಂತಹ ಆಹಾರಗಳನ್ನು ಸೇವಿಸಬೇಕು. ಹಾಗೆಯೇ ಹೆಚ್ಚು ನೀರು ಕುಡಿಯುವುದು, ಕೃತಕ ಉಗುರು ಬಣ್ಣಗಳನ್ನು ಬಳಸುವುದನ್ನು ತಪ್ಪಿಸುವುದರಿಂದ ಉಗುರು ಸೋಂಕನ್ನು ತಡೆಯಬಹುದು (ಏಜೆನ್ಸೀಸ್).