ಶಿವಗಂಗಾ ಜಿಲ್ಲೆಯ ತಿರುಪತ್ತೂರು ಕ್ಷೇತ್ರದಲ್ಲಿ ಶ್ರೀನಿವಾಸ ಸೇತುಪತಿ ವಿರುದ್ಧ ಕೇವಲ ಒಂದು ಮತದ ಅಂತರದಿಂದ ಸೋತಿದ್ದ ಡಿಎಂಕೆ ಮಾಜಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅರ್ಜಿ ಸಲ್ಲಿಸಿದ್ದು, ಕ್ಷೇತ್ರದ ಒಂದು ಅಂಚೆ ಮತಪತ್ರವನ್ನು ಅಧಿಕಾರಿಗಳು ತಪ್ಪಾಗಿ ಬೇರೆ ಕ್ಷೇತ್ರಕ್ಕೆ ವರ್ಗಾಯಿಸಿ, ಅದಾದ ಬಳಿಕ ಅದನ್ನು ತಿರಸ್ಕರಿಸಿದ್ದಾರೆ ಎಂಬುದು ಅರ್ಜಿದಾರರ ವಾದವಾಗಿದೆ. ಈ ಗೊಂದಲ ಬಗೆಹರಿಯುವವರೆಗೆ ಸೇತುಪತಿ ಶಾಸಕರಾಗಿ ಕಾರ್ಯನಿರ್ವಹಿಸದಂತೆ ತಡೆಯಬೇಕು ಎಂದು ಪೆರಿಯಕರುಪ್ಪನ್ ನ್ಯಾಯಾಲಯವನ್ನು ಕೋರಿದ್ದರು.